ಗರ್ಭ ನಿಲ್ಲುತ್ತಿಲ್ಲವೇ..? ಅದಕ್ಕೆ ಕಾರಣಗಳು ಇಲ್ಲಿವೆ ನೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Pregnne-t--01

ನೀವು ಮಗುವನ್ನು ಪಡೆಯಲು ಕೆಲವು ಸಮಯದಿಂದ ಪ್ರಯತ್ನಿಸುತ್ತಿರುವಿರಾ? ಆಗಿದ್ದರೆ, ನೀವು ಗರ್ಭಧರಿಸದಿರಲು ಕಾರಣವನ್ನು ತಿಳಿದುಕೊಂಡು ಅದನ್ನು ಬಗೆಹರಿಸಿಕೊಳ್ಳಲು ಈ ಲೇಖನ ನಿಮಗೆ ಸಹಾಯ ಮಾಡುತ್ತದೆ. ಬರಿ ಲೈಂಗಿಕ ಕ್ರಿಯೆ ಮಾಡುವುದರಿಂದ ಗರ್ಭಧರಿಸಲು ಸಾಧ್ಯವಿಲ್ಲ. ನೀವು ಗರ್ಭಧರಿಸದಿರಲು ಹಲವು ಅಂಶಗಳು ಕಾರಣವಾಗುತ್ತವೆ. ಈ ಲೇಖನ ಆ ಅಂಶಗಳನ್ನು ನಿಮಗೆ ತಿಳಿಸಿ ಅದನ್ನು ನೀವು ಸರಿಪಡಿಸಿಕೊಂಡು ಬೇಗನೆ ಗರ್ಭಧರಿಸಲು ಸಹಾಯವಾಗುತ್ತದೆ.

# ನೀವು ಆರೋಗ್ಯವಾಗಿದ್ದು, ನಿಮ್ಮ ಸಂತಾನೋತ್ಪತ್ತಿ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ನಿಮ್ಮ ಪ್ರತಿ ಋತುಚಕ್ರದಲ್ಲೂ ನೀವು ಗರ್ಭಧರಿಸುವ ಸಾಧ್ಯತೆ ಶೇಕಡಾ 25ರಷ್ಟು ಇರುತ್ತದೆ.

# ಕೆಲವು ಜನರು ಹೆಚ್ಚು ಬಾರಿ ಸಂಭೋಗದಲ್ಲಿ ತೊಡಗಿಕೊಂಡರೆ ಬೇಗ ಗರ್ಭಧರಿಸಬಹುದು ಎಂದು ಭಾವಿಸಿದ್ದಾರೆ. ಆದರೆ ಇದು ಯಾವಾಗಲು ನಿಜವಾಗುವುದಿಲ್ಲ. ಆಗಾಗ್ಗೆ ಲೈಂಗಿಕತೆ ನಡೆಸುವುದರಿಂದ ಪುರುಷನ ವೀರ್ಯದ ಚಟುವಟಿಕೆ ಕಡಿಮೆಯಾಗದಿದ್ದರೂ, ಇದು, ಆಯಾಸ, ತಲೆತಿರುಗುವುದು, ಮಂಡಿಗಳನ್ನು ದುರ್ಬಲಗೊಳಿಸುವುದು ಮತ್ತು ಹೆಚ್ಚು ಮೂತ್ರ ವಿಸರ್ಜನೆ ಮಾಡುವುದು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಈಗೆ ಮಗುವಿಗಾಗಿ ಹೆಚ್ಚು ಲೈಂಗಿಕತೆಯಲ್ಲಿ ಪಾಲ್ಗೊಳ್ಳುತ್ತಿದ್ದರೆ, ಅದು ಹೊರಹೋಗಲು ಕಾರಣವಾಗಬಹುದು. ಇಂತಹ ಸಂದರ್ಭಗಳಲ್ಲಿ ನಿಮ್ಮ ಸಂಗಾತಿ ಲೈಂಗಿಕತೆಯಲ್ಲಿ ಆಸಕ್ತಿಯನ್ನು ಕಳೆದುಕೊಂಡು, ಗರ್ಭಧರಿಸುವ ಅವಕಾಶವನ್ನು ಕಳೆದುಕೊಳ್ಳಬೇಕಾಗಬಹುದು.

# ಹಲವು ದಿನಗಳು ನಿರಂತರವಾಗಿ ಸಂಭೋಗದಿಂದ ದೂರ ಉಳಿದರೆ ಅದು ನೀವು ಗರ್ಭಧರಿಸುವುದರ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವಾಗಲು ನಿಮ್ಮ ಅಂಡೋತ್ಪತ್ತಿ ಆಗುವ ಸಮಯದಲ್ಲೇ ಸಂಭೋಗ ಮಾಡುತ್ತೀರಿ ಎಂದು ಹೇಳಲು ಸಾಧ್ಯವಿಲ್ಲ.

Pregnnet--01

# ಆಗಾಗ್ಗೆ ಲೈಂಗಿಕತೆಯಲ್ಲಿ ತೊಡಗಿಕೊಂಡು, ನಿಮ್ಮ ಅಂಡೋತ್ಪತ್ತಿ ಆಗುವ ದಿನದ ಮೇಲೆ ಹೆಚ್ಚು ಗಮನವಹಿಸಿ. ಒಂದು ವೇಳೆ ನಿಮಗೆ ಅನಿಯಮಿತ ಮುಟ್ಟು ಆಗುತ್ತಿದ್ದರೆ ಅಥವಾ ನಿಮ್ಮ ಫಲವತ್ತತೆಯ ದಿನವನ್ನು ನೀವು ಸ್ಪಷ್ಟವಾಗಿ ಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದರೆ, ಅಂಡೋತ್ಪತ್ತಿ ಕಿಟ್ ಅನ್ನು ಬಳಸಿ. ಅದರ ಫಲಿತಾಂಶ ಒಂದು ಅಥವಾ ಎರಡು ದಿನ ತಡವಾಗಿ ಆಗಿದೆ ಅಥವಾ ಆಗುತ್ತಿದೆ ಎಂದು ತೋರಿಸಿದರೆ ಆ ಸಮಯದಲ್ಲಿ ಸಂಭೋಗವನ್ನು ಮಾಡಿ. ಬರಿ ಮಗುವನ್ನು ಪಡೆಯಲು ಸಂಭೋಗ ಮಾಡಬೇಡಿ, ಆಗ ನೀವು ಲೈಂಗಿಕ ಕ್ರಿಯೆಯನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ.

# ಒತ್ತಡ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸುಂಕ ಹೆರುವ ಜೊತೆಗೆ, ನೀವು ಗರ್ಭತಾಳುವುದರ ಮೇಲೂ ಪರಿಣಾಮ ಬೀರುತ್ತದೆ. ಖಿನ್ನತೆ ಮತ್ತು ಆತಂಕದಂತಹ ಭಾವನಾತ್ಮಕ ಅಡಚಣೆಗಳು ನಿಮ್ಮ ಫಲವತ್ತತೆ ಮಟ್ಟವನ್ನು ಕಡಿಮೆ ಮಾಡುತ್ತವೆ. ಗ್ರಂಥಿಗಳು ಮೂತ್ರಜನಕಾಂಗ, ಥೈರಾಯಿಡ್ ಮತ್ತು ಅಂಡಾಶಯಗಳನ್ನು ನಿಯಂತ್ರಿಸಿ, ನಿಮ್ಮ ಮುಟ್ಟಿನ ಮೇಲೆ ಪರಿಣಾಮ ಬೀರುತ್ತದೆ. ನೀವು ನಿಮ್ಮ ಒತ್ತಡದಿಂದ ಹೊರಬರಲು ನಿಮಗೆ ನೀವೇ ಸ್ವಲ್ಪ ಸಮಯ ನೀಡಿ, ವಿಶ್ರಾಂತಿ ಪಡೆಯಬೇಕು, ನಿಮ್ಮ ಮನಸ್ಸಿಗೆ ಖುಷಿ ನೀಡುವ ಕೆಲಸಗಳನ್ನು ಮಾಡಿ, ನಿಮ್ಮ ಸಂಗಾತಿ ಜೊತೆ ಪ್ರಯಾಣ ಮಾಡಿ ಮತ್ತು ಯೋಗ ಮಾಡಿ, ಮನೋಶಾಸ್ತ್ರಜ್ಞರನ್ನು ಭೇಟಿ ಮಾಡಿ.

Pregnent--01

# ಗರ್ಭಧರಿಸದಿರಲು ಪ್ರಮುಖ ಅಂಶಗಳಲ್ಲಿ ಒಂದು ಕಡಿಮೆ ವೀರ್ಯ ಅಥವಾ ಕಡಿಮೆ ಗುಣಮಟ್ಟದ ವೀರ್ಯ (ಇದಕ್ಕೆ ರಚನಾತ್ಮಕ ಅಸಹಜತೆಗಳು ಕಾರಣ ಇರಬಹುದು). ಇದು ಗರ್ಭಧರಿಸದ ಜೋಡಿಗಳಲ್ಲಿ ಶೇಕಡಾ ೩೦ ರಿಂದ ೪೦ ರಷ್ಟು ಜೋಡಿಗಳಲ್ಲಿ ಇದೆ ಸಮಸ್ಯೆ ಇರುತ್ತದೆ. ವೈದ್ಯರನ್ನು ಭೇಟಿ ಮಾಡುವುದು ಸೂಕ್ತ. ನಿಮ್ಮ ವೀರ್ಯವನ್ನು ಹೆಚ್ಚಿಸಲು ಅಥವಾ ವೀರ್ಯದ ಗುಣಮಟ್ಟವನ್ನು ಹೆಚ್ಚಿಸಲು ಅವರು ಸಲಹೆ ಮತ್ತು ಸೂಕ್ತ ಚಿಕಿತ್ಸೆಯನ್ನು ನೀಡುವರು. ಅಥವಾ ನಿಮ್ಮ ಸಂಪೂರ್ಣ ಸ್ಕ್ಯಾನ್ ಮಾಡಿ, IVF ಮಾಡಲು ಸಲಹೆ ನೀಡಬಹುದು, IVF ಎಂದರೆ, ನಿಮ್ಮ ವೀರ್ಯವನ್ನು ಮೊಟ್ಟೆ ಜೊತೆ ದೇಹದ ಹೊರಗಡೆ ಸಮ್ಮಿಲನ ಮಾಡುವುದು ಮತ್ತು ಫಲವತ್ತತೆಯ ಮೊಟ್ಟೆಯನ್ನು ಯೋನಿಯಲ್ಲಿ ಕಳುಹಿಸುವುದು.

# ಹಲವು ಮಹಿಳೆಯರು ಲೈಂಗಿಕ ಕ್ರಿಯೆ ಮುಗಿದ ತಕ್ಷಣ ಯೋನಿಯನ್ನು ಸ್ವಚ್ಛ ಮಾಡಿಕೊಳ್ಳಲು ಮುಂದಾಗುವರು. ಆದರೆ, ಲೈಂಗಿಕ ಕ್ರಿಯೆ ಆದ ನಂತರ ಸ್ವಲ್ಪ ಸಮಯ ಹಾಸಿಗೆಯ ಮೇಲೆ ಇರುವುದರಿಂದ ವೀರ್ಯ ಮೊಟ್ಟೆಯನ್ನು ತಲುಪಲು ಸಮಯ ನೀಡಿದಂತಾಗುತ್ತದೆ. ನೀವು ಕೆಲಸ ಮುಗಿದ ನಂತರ ದಿಡೀರ್ ಅನೆ ಹೋಗಿ ತೊಳೆದುಕೊಳ್ಳುವುದರಿಂದ ಗುರುತ್ವಾಕರ್ಷಣೆ ಇಂದ ವೀರ್ಯ ಹಿಂದಕ್ಕೆ ಬಂದು ತೊಳೆದುಕೊಳ್ಳುವಾಗ ಆಚೆಗೆ ಹೊರಟು ಹೋಗಬಹುದು. ನೀವು ಗರ್ಭಧರಿಸದಿರಲು ಇದು ಒಂದು ಕಾರಣ ಇರಬಹುದು. ಸಂಭೋಗದ ನಂತರ ನೀವು ಕೆಲವು ಸಮಯ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯಿರಿ, ನಿಮ್ಮ ಸಂಗಾತಿ ಜೊತೆ ಮುದ್ದಾಡಿ, ಇದರಿಂದ ನೀವು ಗರ್ಭಧರಿಸುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಆದರೆ ಕೆಲವು ವೈದ್ಯರು ಹೇಳುವ ಪ್ರಕಾರ ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆಗೆ ತೆರಳುವುದು ಮತ್ತು ಗರ್ಭಧಾರಣೆಗೆ ಯಾವುದೇ ಸಂಬಂಧವಿಲ್ಲ ಎನ್ನಲಾಗುತ್ತೆ. ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಿದರೂ ನೀವು ಕೂಡ ಗರ್ಭಿಣಿಯಾಗುತ್ತಾರೆ. ಒಂದು ಸಲ ವೀರ್ಯವು ಮಹಿಳೆಯ ಯೋನಿಯೊಳಗೆ ಹೋದರೆ ಅದನ್ನು ವಾಪಸ್ ತರಲು ಸಾಧ್ಯವಿಲ್ಲ. ಮೂತ್ರವಿಸರ್ಜನೆಯಿಂದ ವೀರ್ಯವು ಹೊರಬರುವುದಿಲ್ಲ ಮತ್ತು ಗರ್ಭಧಾರಣೆ ಸಾಧ್ಯತೆ ಕಡಿಮೆ ಮಾಡಲ್ಲ.

Facebook Comments

Sri Raghav

Admin