ನಾಯಿ ಬೊಗಳಿದ್ದಕ್ಕೆ ಬೇರೆ ವಾರ್ಡ್ ಕೇಳಿದ ಲಾಲೂ

ಈ ಸುದ್ದಿಯನ್ನು ಶೇರ್ ಮಾಡಿ

Lalu-PRasad

ರಾಂಚಿ, ಸೆ.4 (ಪಿಟಿಐ)- ಬಹುಕೋಟಿ ಮೇವು ಹಗರಣ ಸಂಬಂಧ ಶಿಕ್ಷೆಗೆ ಗುರಿಯಾದ ನಂತರ ಅನಾರೋಗ್ಯದಿಂದ ರಾಂಚಿಯ ರಾಜೇಂದ್ರ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ರಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬೇರೆ ವಾರ್ಡ್‍ಗೆ ಸ್ಥಳಾಂತರಗೊಳ್ಳಲು ಮನವಿ ಮಾಡಿದ್ದಾರೆ.

ಇದಕ್ಕೆ ಕಾರಣ ಏನು ಗೊತ್ತೆ..?
ತಾವು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ವಾರ್ಡ್‍ನಲ್ಲಿ ಬೀದಿ ನಾಯಿಗಳ ಬೊಗಳುವಿಕೆ, ಸೊಳ್ಳೆಗಳ ಹಾವಳಿ ಹಾಗೂ ಶುಚಿತ್ವದ ಕೊರತೆ ಇದೆ. ಹೀಗಾಗಿ ತಮಗೆ ಸೂಕ್ತವಾದ ವಾರ್ಡ್‍ಗೆ ಶಿಫ್ಟ್ ಮಾಡುವಂತೆ ಅವರು ರಿಮ್ಸ್ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ.

Facebook Comments

Sri Raghav

Admin