ಕಳ್ಳನೆಂದು ಶಂಕಿಸಿ ಬಾಲಕನನ್ನು ಹೊಡೆದು ಕೊಂದ ಜನರ ಗುಂಪು

ಈ ಸುದ್ದಿಯನ್ನು ಶೇರ್ ಮಾಡಿ

Lynched

ನವದೆಹಲಿ, ಸೆ.4 (ಪಿಟಿಐ)-ದೊಂಬಿ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಮರಣದಂಡನೆಗೆ ಗುರಿಪಡಿಸುವ ಸಂಬಂಧ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸುತ್ತಿರುವಾಗಲೇ ದೇಶದ ವಿವಿಧೆಡೆ ಉದ್ರಿಕ್ತ ಗುಂಪಿನ ಹಿಂಸಾಚಾರ ಮತ್ತು ಕೊಲೆ ಮುಂದುವರಿದಿದೆ.  ಕಳ್ಳನೆಂಬ ಶಂಕೆಯಿಂದ 16 ವರ್ಷದ ಬಾಲಕನೊಬ್ಬನನ್ನು ಗುಂಪೊಂದು ಥಳಿಸಿ ಹತ್ಯೆ ಮಾಡಿರುವ ಘಟನೆ ರಾಜಧಾನಿ ದೆಹಲಿಯ ಮುಕುಂದ್‍ಪುರ್ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದಿದೆ. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಯೊಂದಕ್ಕೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಮಾಲೀಕ ಮತ್ತು ಸ್ಥಳೀಯರು ಬಾಲಕನನ್ನು ಮನಸೋಇಚ್ಛೆ ಥಳಿಸಿದರು. ತೀವ್ರ ಗಾಯಗೊಂಡ ಬಾಲಕ ಹತನಾದ. ಈ ಘಟನೆ ಸಂಬಂಧ ಭಲಸ್ವಾ ಡೇರಿ ಪೊಲೀಸರು ಮೂವರನ್ನು ಬಂಧಿಸಿದ್ದು, ಪರಾರಿಯಾಗಿರುವ ಇತರ ಮೂವರಿಗಾಗಿ ಶೋಧ ಮುಂದುವರಿಸಿದ್ದಾರೆ.

Facebook Comments

Sri Raghav

Admin