60 ಶತಕೋಟಿ ಡಾಲರ್ ವೆಚ್ಚದಲ್ಲಿ 100 ಏರ್ ಪೋರ್ಟ್’ಗಳ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

Suresh-Prabhu

ನವದೆಹಲಿ, ಸೆ.4 (ಪಿಟಿಐ)- ಮುಂದಿನ 10 ರಿಂದ 15 ವರ್ಷಗಳಲ್ಲಿ 60 ಶತಕೋಟಿ ಡಾಲರ್ (4.2 ಲಕ್ಷ ಕೋಟಿ ರೂ.ಗಳ) ವೆಚ್ಚದಲ್ಲಿ ದೇಶದ ವಿವಿಧೆಡೆ 100 ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಯೋಜನೆ ಹೊಂದಿರುವುದಾಗಿ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ. ಭಾರತದ ವಿಮಾನಯಾನ ವಲಯವು ವಿಶ್ವದಲ್ಲಿ ಅತಿವೇಗವಾಗಿ ಬೆಳೆಯುತ್ತಿದೆ. ಕಳೆದ 50 ತಿಂಗಳಲ್ಲಿ ಎರಡಂಕಿ ಸಂಚಾರ ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದರು. ಮುಂದಿನ 15 ರಿಂದ 20 ವರ್ಷಗಳಲ್ಲಿ ಸಾರ್ವಜನಿಕ ಸಂಸ್ಥೆ-ಖಾಸಗಿ ಸಹಭಾಗಿತ್ವದಲ್ಲಿ ವಿವಿಧೆಡೆ 100 ಏರ್ ಪೋರ್ಟ್ ಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ 60 ಶತಕೋಟಿ ಡಾಲರ್ ವೆಚ್ಚವಾಗಲಿದೆ ಎಂದು ಅವರು ಹೇಳಿದರು.

Facebook Comments

Sri Raghav

Admin