ಐಎಸ್‍ಎಸ್‍ಎಫ್ ವಿಶ್ವಚಾಂಪಿಯನ್‍ಶಿಪ್‍ ನಲ್ಲಿ ಶೂಟರ್ ಓಂಪ್ರಕಾಶ್‍ಗೆ ಚಿನ್ನದ ಗರಿ

ಈ ಸುದ್ದಿಯನ್ನು ಶೇರ್ ಮಾಡಿ

Om-Prakash

ಚಾಂಗ್‍ವೊನ್, ಸೆ.4 (ಪಿಟಿಐ)-ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಶೂಟರ್‍ಗಳ ಪದಕ ಬೇಟೆ ಮುಂದುವರಿದಿದೆ. ದಕ್ಷಿಣ ಕೊರಿಯಾ ಚ್ಯಾಂಗ್‍ವೊನ್‍ನಲ್ಲಿ ಇಂದು ನಡೆದ ಐಎಸ್‍ಎಸ್‍ಎಫ್ ವಿಶ್ವಚಾಂಪಿಯನ್‍ಶಿಪ್‍ನ ಪುರುಷರ 50 ಮೀಟರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‍ನಲ್ಲಿ ಭಾರತೀಯ ಶೂಟರ್ ಓಂ ಪ್ರಕಾಶ್ ಮಿಥರ್‍ವಾಲ್ ಚಿನ್ನದ ಸಾಧನೆ ಮಾಡಿದ್ದಾರೆ.

ಇದು 23 ವರ್ಷದ ಶೂಟರ್ ಐಎಸ್‍ಎಸ್‍ಎಫ್ ವಿಶ್ವ ಚಾಂಪಿಯನ್‍ಶಿಫ್‍ನಲ್ಲಿ ಗೆದ್ದ ಚೊಚ್ಚಲ ಬಂಗಾರದ ಪದಕವಾಗಿದೆ. ಈ ವರ್ಷದ ಆರಂಭದಲ್ಲಿ ಗೋಲ್ಡ್ ಕೋಸ್ಟ್‍ನಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಓಂ ಪ್ರಕಾಶ್ 10 ಮೀಟರ್ ಏರ್ ಪಿಸ್ತೂಲ್ ಮತ್ತು 50 ಮೀಟರ್ ಪಿಸ್ತೂಲ್ ಸ್ಫರ್ಧೆಯಲ್ಲಿ ಕಂಚು ಪದಕ ಗೆದ್ದಿದ್ರು. ಇಂದಿನ ಪಂದ್ಯದಲ್ಲಿ ನಿಖರ ಗುರಿಯೊಂದಿಗೆ 564 ಸ್ಕೋರ್ ಗಳಿಸಿ ಸ್ವರ್ಣ ಪದಕ ಕೊರಳಿಗೇರಿಸಿದರು.

ಇದೇ ಸ್ಪರ್ಧೆಯಲ್ಲಿ ಭಾರತದ ಮೊತ್ತೊಬ್ಬ ಶೂಟರ್ ಜೀತು ರಾಯ್ 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ದೇಶದ ಪ್ರತಿಭಾವಂತ ಶೂಟರ್‍ಗಳಾದ ಮನು ಭಾಕೆರ್ ಮತ್ತು ಹೀನಾ ಸಿಂಧು ಅವರೂ ಕೂಡ ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ನಿರೀಕ್ಷಿತ ಫಲಿತಾಂಶದ ಸಾಧನೆ ಮಾಡಲಿಲ್ಲ.  ಭಾರತೀಯ ಶೂಟರ್‍ಗಳಾದ ಅಂಜುಂ ಮೌಡ್ಗಿಲ್ ಮತ್ತು ಅಪೂರ್ವಿ ಚಾಂದೆಲಾ 2020ರಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯುವ ಮೂಲಕ ದೇಶಕ್ಕೆ ಹೆಮ್ಮೆಪಡುವಂತಾಗಿದೆ.

Facebook Comments

Sri Raghav

Admin