ವಿಜಯೋತ್ಸವದಲ್ಲಿ ಆ್ಯಸಿಡ್ ದಾಳಿ ನಡೆಸಿದ್ದ ಮೂವರು ಪೊಲೀಸ್ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Acid-Attack--01

ತುಮಕೂರು, ಸೆ.4- ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಅಭ್ಯರ್ಥಿಯ ವಿಜಯೋತ್ಸವದಲ್ಲಿ ಆ್ಯಸಿಡ್ ರೂಪದ ರಾಸಾಯನಿಕ ದಾಳಿ ನಡೆಸಿದ ಮೂವರನ್ನು ವಶಕ್ಕೆ ಪಡೆದಿದ್ದಾರೆ.6ನೆ ವಾರ್ಡ್‍ನ ಕಾಂಗ್ರೆಸ್ ಅಭ್ಯರ್ಥಿ ಇನಾಯತ್‍ವುಲ್ಲಾಖಾನ್ ಅವರ ಮೆರವಣಿಗೆ ವೇಳೆ ಆ್ಯಸಿಡ್ ದಾಳಿ ಮಾಡಿದ ಆರೋಪಿಗಳಾದ ಅಲ್ತಾಫ್ ಅಲಿಯಾಸ್ ಕುಳ್ಳ, ಇಲಿಯಾಸ್ ಮತ್ತು ಜಲೀಲ್ ಅಲಿಯಾಸ್ ಕುಳ್ಳಿಯನ್ನು ರಾತ್ರಿ ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ.

ಪೊಲೀಸರಿಗೆ ದೊರೆತ ವಿಡಿಯೋ ಆಧರಿಸಿ ಮೂವರನ್ನು ವಶದಲ್ಲಿರಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಬಳಿಕ ಸ್ಥಳೀಯ ಪೊಲೀಸರು ತೀವ್ರ ತನಿಖೆ ಕೈಗೊಂಡು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  ದಾಳಿ ಬಳಿಕ ಮಾಜಿ ಸಚಿವ ಸೊಗಡು ಶಿವಣ್ಣ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗೆ ಸೂಚಿಸಿದ್ದರು.  ಘಟನೆಯಲ್ಲಿ 40 ರಿಂದ 45 ಮಂದಿಯ ಮುಖ, ಕಣ್ಣು, ಕುತ್ತಿಗೆ, ಕೈ ಸೇರಿದಂತೆ ವಿವಿಧ ಭಾಗಗಳಿಗೆ ಆ್ಯಸಿಡ್ ಮಾದರಿಯ ರಾಸಾಯನಿಕದಿಂದ ಗಾಯವಾಗಿದ್ದು, ಇಬ್ಬರಿಗೆ ಕಣ್ಣಿನ ರೆಪ್ಪೆ ಮೇಲೆ ಗಾಯವಾಗಿದೆ. ಆದರೆ, ಕಣ್ಣಿಗೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

Acid-Attck--01

ಇದರ ನಡುವೆ ನಗರದಲ್ಲಿ ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿ ನವಾಜ್ ಕುಟುಂಬದವರು ತಮ್ಮ ಮನೆ ಮೇಲೆ ಸಯ್ಯದ್ ಮಹಮ್ಮದ್ ಅಶು ಎಂಬುವವರು ದಾಳಿ ನಡೆಸಿ ಹಲ್ಲೆಗೆ ಮುಂದಾಗಿದ್ದ ಬಗ್ಗೆ ಅಭ್ಯರ್ಥಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.  ಈ ಸಂಬಂಧ ನಗರ ಠಾಣೆ ಇನ್ಸ್‍ಪೆಕ್ಟರ್ ಚಂದ್ರಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಡಿವೈಎಸ್‍ಪಿ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಗರದಲ್ಲಿ ನಡೆದಿರುವ ಎರಡೂ ಪ್ರಕರಣಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Facebook Comments

Sri Raghav

Admin