ಮೋದಿ ಭೇಟಿ ಮಾಡಿದ ಮೋಹನ್‍ಲಾಲ್, ಬಿಜೆಪಿ ಸೇರುತ್ತಾರೆ ಸೂಪರ್ ಸ್ಟಾರ್..?

ಈ ಸುದ್ದಿಯನ್ನು ಶೇರ್ ಮಾಡಿ

Mohan-Lal--01

ನವದೆಹಲಿ, ಸೆ.4- ಮಲೆಯಾಳಂ ಚಿತ್ರರಂಗದ ಸೂಪರ್‍ಸ್ಟಾರ್ ಮೋಹನ್‍ಲಾಲ್ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಿನ್ನೆ ಮೋದಿ ಅವರನ್ನು ಭೇಟಿ ಮಾಡಿದ ಲಾಲ್ ತಮ್ಮ ವಿಶ್ವಶಾಂತಿ ಸಮಾಜ ಸೇವಾ ಸಂಘಟನೆಯ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು.

ಅಲ್ಲದೆ, ಕೇರಳ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ನೀಡಿರುವ ಹಣಕಾಸು ನೆರವು ಮತ್ತು ಸಹಾಯಹಸ್ತಕ್ಕೆ ಕೃತಜ್ಞತೆ ಸಲ್ಲಿಸಿದರು. ವಿಶ್ವದ ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲೆಯಾಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸಹಕಾರ-ಬೆಂಬಲಕ್ಕಾಗಿ ಅವರು ಪ್ರಧಾನಿಯನ್ನು ಅಭಿನಂದಿಸಿದರು.  ಇದು ಸೌಹಾರ್ದಯುತ ಭೇಟಿಯಾದರೂ ರಾಜಕೀಯ ವಲಯದಲ್ಲಿ ಮೋಹನ್‍ಲಾಲ್ ಮತ್ತು ಪ್ರಧಾನಿ ಅವರ ಮಾತುಕತೆ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.   ಮೋಹನ್‍ಲಾಲ್ ಬಿಜೆಪಿ ಸೇರುವ ಸಾಧ್ಯತೆಯಿದೆ. ಅಲ್ಲದೆ, 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆ ಇದೆ ಎಂಬ ವದಂತಿಗಳೂ ಹಬ್ಬಿವೆ.

 

# ವಿಶ್ವಶಾಂತಿ ಫೌಂಡೇಷನ್‌ :

ಮೋಹನ್‌ಲಾಲ್‌ ತನ್ನ ತಂದೆ ವಿಶ್ವನಾಥನ್‌ ನಾಯರ್‌ ಮತ್ತು ತಾಯಿ ಶಾಂತಾಕುಮಾರಿ ಅವರ ಸ್ಮರಣಾರ್ಥ ವಿಶ್ವಶಾಂತಿ ಫೌಂಡೇಷನ್‌ ಸ್ಥಾಪಿಸಿದ್ದಾರೆ. ವೈಯನಾಡಿನಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಸಂಸ್ಥೆ ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಗೆ ಪ್ರಧಾನಿ ಅವರನ್ನು ಆಹ್ವಾನಿಸಲಾಗಿದೆ. ಪ್ರವಾಹ ಪರಿಹಾರ ಕಾರ್ಯಗಳಲ್ಲಿ ವಿಶ್ವಶಾಂತಿ ಫೌಂಡೇಷನ್‌ ಆರ್‌ಎಸ್‌ಎಸ್‌ನ ಸೇವಾ ಭಾರತಿಯೊಂದಿಗೆ ಕೈಜೋಡಿಸಿದೆ.  ಈ ಫೌಂಡೇಷನ್‌ ಮೂಲಕ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಯೋಜಿಸಲಾಗಿದ್ದು, ಆರ್‌ಎಸ್‌ಎಸ್ ಇದರ ಬೆನ್ನೆಗೆ ನಿಂತಿದೆ. ಕೇರಳದಲ್ಲಿ ಮೋಹನ್‌ಲಾಲ್‌ ನಟನಾಗಿ ಹೆಸರು ಮಾಡಿದ್ದಾರೆ. ಆದರೆ, ಅದಕ್ಕಿಂತ ಹೆಚ್ಚಿನದು, ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಬೆಳೆಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

#  ಲೋಕಸಭಾ ಚುನಾವಣೆಯಲ್ಲಿ ಮೋಹನ್‌ಲಾಲ್ ಕಣಕ್ಕಿಳಿಸಲು ಆರ್‌ಎಸ್‌ಎಸ್‌ ಕಾರ್ಯತಂತ್ರ
ಬಿಜೆಪಿ ಅಭ್ಯರ್ಥಿಯಾಗಿ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಆರ್‌ಎಸ್‌ಎಸ್‌ ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಮೋಹನ್‌ಲಾಲ್‌ ಅವರನ್ನು ಕೇರಳದ ತಿರುವನಂತಪುರಂನಿಂದ ಸ್ಪರ್ಧಿಸುವಂತೆ ಕೇಳಲಾಗಿದೆ. ಅವರು ಬಿಜೆಪಿ ಸೇರಲಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ
ಹರಡಿದೆಯಾದರೂ ಮೋಹನ್‌ಲಾಲ್‌ ಇದನ್ನು ಖಚಿತ ಪಡಿಸಿಲ್ಲ.

ಮೋಹನ್‌ಲಾಲ್‌ರನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಆರ್‌ಎಸ್ಎಸ್‌ ಹೆಚ್ಚಿನ ಆಸಕ್ತಿ ವಹಿಸಿದೆ ಹಾಗೂ ಸಭೆ ನಡೆಸಿ ಚರ್ಚಿಸುತ್ತಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಆದರೆ, ಆರ್‌ಎಸ್‌ಎಸ್‌ ಸಭೆಯ ಕುರಿತು ಬಿಜೆಪಿಗೆ ರಾಜ್ಯ ಘಟಕದ ಮುಖಂಡರಿಗೆ ಮಾಹಿತಿ ರವಾನೆಯಾಗಿಲ್ಲ. ವೈಯನಾಡಿನಲ್ಲಿ ತಮ್ಮ ಫೌಂಡೇಷನ್‌ ಆಯೋಜಿಸಿರುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲು ಸೋಮವಾರ ಮೋಹನ್‌ಲಾಲ್‌ ದೆಹಲಿ ಭೇಟಿ ನೀಡಿದ್ದರು. ಈ ಭೇಟಿಯ ಬಳಿಕ ನಟನ ರಾಜಕೀಯ ಪ್ರವೇಶದ ಕುರಿತು ಸುದ್ದಿ ಹರಡಿದೆ.

Facebook Comments

Sri Raghav

Admin