ಬಹು ಉಪಯೋಗಿ ಮಹೀಂದ್ರಾ ಮಾರಾಜೋ ಮಾರುಕಟ್ಟೆಗೆ

ಈ ಸುದ್ದಿಯನ್ನು ಶೇರ್ ಮಾಡಿ

Mahindra--01

ನಾಸಿಕ್(ಮಹಾರಾಷ್ಟ್ರ), ಸೆ.4- ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ದೇಶದ ಪ್ರತಿಷ್ಠಿತ ಮಹೀಂದ್ರಾ ಸಂಸ್ಥೆ ಬಹು ಉಪಯೋಗಿ ವಾಹನ (ಮಲ್ಟಿ ಯುಟಿಲಿಟಿ ವಕಲ್-ಎಂಯು) ಮಜಾರೋವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.  ಮಹಾರಾಷ್ಟ್ರದ ನಾಸಿಕ್‍ನಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕಾ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಬಹು ನಿರೀಕ್ಷಿತ ಎಂಯುನನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದರು.

ಮಜಾರೋ ವಾಹನವು ಎಂ-2, ಎಂ-4, ಎಂ-6 ಹಾಗೂ ಎಂ-8 ಈ ನಾಲ್ಕು ನಮೂನೆಗಳಲ್ಲಿ ಲಭ್ಯದೆ. ಈ ಎಲ್ಲ ಮಾಡಲ್‍ಗಳಲ್ಲೂ ಚಾಲಕ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಸೆಫ್ಟಿ ಏರ್‍ಬ್ಯಾಗ್‍ಗಳು ಮತ್ತು ಚತುಷ್ಟಚಕ್ರಗಳಿಗೂ ಡಿಸ್ಕ್ ಬ್ರೇಕ್‍ಗಳನ್ನು ಅಳವಡಿಸಲಾಗಿದೆ. ಈ ವಾಹನ ಎಂಜಿನ್, ಛಾಸಿಸ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಮಜಾರೋವನ್ನು ಅಭಿವೃದ್ದಿಗೊಳಿಸಲಾಗಿದೆ. ಎರಡು ಮತ್ತು ಮೂರನೇ ಸಾಲಿನ ಆಸನಗಳಿಗೆ ರೂಫ್ ಮೌಂಟೆಡ್ ಎಸಿ ವೆಂಟ್ (ಹವಾನಿಯಂತ್ರಿತ ಸೌಲಭ್ಯ ಅಳವಡಿಸಲಾಗಿದೆ ಎಂದು ಗೋಯೆಂಕಾ ಮತ್ತು ಮಹೀಂದ್ರಾ ವಿವರಿಸಿದರು.

ಎಲ್ಲ ನಾಲ್ಕು ಮಾದರಿಗಳಲ್ಲೂ ಎಂಟು ಆಸನಗಳ ಸೌಲಭ್ಯದೆ. ಮೊದಲ, ಎರಡನೇ ಮತ್ತು ಮೂರನೇ ಸಾಲಿನ ಪ್ರಯಾಣಿಕರು ಆರಾಮವಾಗಿ ಕುಳಿತು ಪ್ರಯಾಣಿಸಲು ಸಾಧ್ಯವಾಗುವಂತೆ ಹೆಚ್ಚು ಸ್ಥಳಾವಕಾಶ ಹೊಂದಾಣಿಕೆ ಸೌಲಭ್ಯವನ್ನು ಕಲ್ಪಿಸಲಾಗಿದೆ.  ಪ್ರಸ್ತುತ ಡೀಸೆಲ್ ಎಂಜಿನ್ ಮತ್ತು ಮ್ಯಾನುಯಲ್ ಟ್ರಾನ್ಸ್‍ಮಿಷನ್ ಸಂಯೋಜನೆಯಲ್ಲಿ ಮಾತ್ರ ಈ ವಾಹನ ಲಭ್ಯದ್ದು, ಪೆಟ್ರೋಲ್ ಮತ್ತು ಸ್ವಯಂಚಾಲಿತ ಟ್ರಾನ್ಸ್‍ಮಿಷನ್‍ಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮಜಾರೋ ಎಂಜಿನ್ 1,500 ಸಿಸಿ ಸಾಮಥ್ರ್ಯದ ಸದೃಢ ಎಂಜಿನ್ ಹೊಂದಿದ್ದು, 123 ಬಿಎಚ್‍ಪಿಯಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ. ಆರಂಭಿಕ ಮಾಡಲ್ ಮಜಾರೋ 9.99 ಲಕ್ಷ ರೂ.ಗಳು ಹಾಗೂ ಟಾಪ್‍ಎಂಡ್ ವಾಹನ 13.5 ಲಕ್ಷ ರೂ.ಗಳಿಗೆ ಲಭ್ಯ.

Facebook Comments

Sri Raghav

Admin