ಕೃಷ್ಣಾಷ್ಟಮಿ ಮೊಸರು ಕುಡಿಕೆ ಒಡೆಯುವ ವೇಳೆ ನಡೆಯಿತೊಂದು ದುರಂತ..!

ಈ ಸುದ್ದಿಯನ್ನು ಶೇರ್ ಮಾಡಿ

Dahi--01
ಮುಂಬೈ/ಥಾಣೆ, ಸೆ.4 (ಪಿಟಿಐ)- ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಹರಾಷ್ಟ್ರದ ರಾಜಧಾನಿ ಮುಂಬೈ ಮತ್ತು ಉಪನಗರಗಳಲ್ಲಿ ನಡೆದ ದಹಿ ಹುಂಡಿ(ಮೊಸರು ಕುಡಿಕೆ ಒಡೆಯುವ) ಸ್ಪರ್ಧೆ ವೇಳೆ ಯುವಕನೊಬ್ಬ ಮೃತಪಟ್ಟು, 120ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಮುಂಬೈನ ಧಾರವಿಯಲ್ಲಿ ನಿನ್ನೆ ನಡೆದ ದಹಿ ಹುಂಡಿ ಆಚರಣೆ ವೇಳೆ ಮಾನವ ಪಿರಮಿಡ್‍ನ ಮೊದಲ ಸಾಲನ್ನು ಹತ್ತಿದ್ದ ಖುಷ್ ಖಾಂದಾರೆ(20) ಎಂಬ ಸ್ಪರ್ಧಿಗೆ ಮೂರ್ಛೆ ರೋಗ ಕಾಣಿಸಿಕೊಂಡು ನಿಯಂತ್ರಣ ತಪ್ಪಿ ಕೆಳಗೆ ಬಿದ್ದ. ಆತನನ್ನು ಸಿಯೋನ್ ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಮುನ್ನವೇ ಮೃತಪಟ್ಟ. ಮುಂಬೈ, ಥಾಣೆ ಮತ್ತು ಸುತ್ತಮುತ್ತಲ ಉಪ ನಗರಗಳಲ್ಲಿ ನಡೆದ ದಹಿ ಹುಂಡಿ ಸ್ಪರ್ಧೆಯಲ್ಲಿ 122 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Facebook Comments

Sri Raghav

Admin