ಹಿರಿಯ ಪೊಲೀಸ್ ಅಧಿಕಾರಿಗಳ ವಸತಿ ಗೃಹ ನಿರ್ಮಾಣಕ್ಕೆ ಪ್ರಸ್ತಾವನೆ

ಈ ಸುದ್ದಿಯನ್ನು ಶೇರ್ ಮಾಡಿ

DCM-Commisenor

ಬೆಂಗಳೂರು, ಸೆ.4-ಶಿವಾಜಿನಗರದ ಬ್ರಾಡ್‍ವೇ ರಸ್ತೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಸತಿ ಗೃಹ, ಬೆಂಗಳೂರು ಪೂರ್ವ ಡಿಸಿಪಿ ಕಚೇರಿ ಹಾಗೂ ಎಸಿಪಿ ಕಚೇರಿ ನಿರ್ಮಾಣಕ್ಕೆ ಎರಡು ದಿನಗಳಲ್ಲಿ ಪ್ರಸ್ತಾವನೆ ಸಲ್ಲಿಸುವುದಾಗಿ ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ತಿಳಿಸಿದರು. ಇಂದು ಡಿಸಿಎಂ ಪರಮೇಶ್ವರ್ ಅವರು ಕೈಗೊಂಡಿದ್ದ ನಗರಪ್ರದಕ್ಷಿಣೆ ವೇಳೆ ಹಾಜರಿದ್ದ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್, ಬ್ರಾಡ್‍ವೇ ರಸ್ತೆಯಲ್ಲಿರುವ ಪೊಲೀಸ್ ಇಲಾಖೆಗೆ ಸೇರಿರುವ ಖಾಲಿ ಜಾಗ ಪರಿಶೀಲನೆ ವೇಳೆ ಈ ಜಾಗದ ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಿದಾಗ ಪೊಲೀಸ್ ಆಯುಕ್ತರು ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು.

ಈ ಹಿಂದೆ ಈ ಜಾಗದಲ್ಲಿ ಡಿಸಿಪಿ ವಸತಿ ಗೃಹವಿತ್ತು. ಸಂಚಾರಿ ಪೊಲೀಸ್ ಠಾಣೆಯೂ ಇತ್ತು. ಅಂದಿನ ಪೊಲೀಸ್ ಆಯುಕ್ತರಾಗಿದ್ದ ಕೋದಂಡರಾಮಯ್ಯ ಅವರನ್ನು ಇದೇ ನಿವಾಸದಲ್ಲಿ ವಿದ್ಯಾರ್ಥಿ ನಾಯಕನಾಗಿದ್ದ ತಾವು ಭೇಟಿ ಮಾಡಿದ್ದಾಗಿ ಪರಮೇಶ್ವರ್ ನೆನಪಿಸಿಕೊಂಡರು. ಇಂತಹ ಉತ್ತಮ ಜಾಗವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ಮಾಡಿದರು. ವಿಧಾನಸೌಧ, ಪೊಲೀಸ್ ಆಯುಕ್ತರ ಕಚೇರಿ, ಹೈಕೋರ್ಟ್ ಸೇರಿದಂತೆ ನಗರದಲ್ಲಿನ ಕೇಂದ್ರ ಭಾಗದಲ್ಲಿರುವ ಈ ಜಾಗದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗೃಹ ನಿರ್ಮಾಣ ಮಾಡಲು ಸೂಕ್ತವಾಗಿದೆ. ಈ ಜಾಗದಲ್ಲಿ ಲಂಬಾಕಾರವಾಗಿ 20ಕ್ಕೂ ಹೆಚ್ಚು ಕಟ್ಟಡಗಳನ್ನು ನಿರ್ಮಿಸಬಹುದಾಗಿದೆ ಎಂದು ಸುನೀಲ್‍ಕುಮಾರ್ ಅವರು ಸೂಚಿಸಿದಾಗ ಕನಿಷ್ಠ 10 ಕಟ್ಟಡಗಳನ್ನಾದರೂ ಇಲ್ಲಿ ಕಟ್ಟಬಹುದು. ಮೊದಲು ಪ್ರಸ್ತಾವನೆ ಸಲ್ಲಿಸಿ ಎಂದು ಪರಮೇಶ್ವರ್ ಹೇಳಿದರು.

ಇದಕ್ಕೂ ಮುನ್ನ ಬ್ರಾಡ್‍ವೇ ರಸ್ತೆಯಲ್ಲಿನ ವಾರ್ಡ್ ನಂ.63ರಲ್ಲಿ 2,438 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಅತ್ಯಾಧುನಿಕ ಸೌಲಭ್ಯವುಳ್ಳ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದ ಪರಮೇಶ್ವರ್ ಅವರು ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಿರುವ ಈ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ನಿಗದಿಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದರು.

Facebook Comments

Sri Raghav

Admin