ಮಗಳಿಗೆ ಅಪ್ಪನ ಸೆಲ್ಯೂಟ್, ಒಬ್ಬ ತಂದೆಯ ಸಾರ್ಥಕ ಕ್ಷಣಕ್ಕೆ ಸಾಕ್ಷಿಯಾಯಿತು ಈ ಘಟನೆ..!

ಈ ಸುದ್ದಿಯನ್ನು ಶೇರ್ ಮಾಡಿ

Polioce

ಹೈದರಾಬಾದ್, ಸೆ. 4 : ನಿಜಕ್ಕೂ ಒಬ್ಬ ತಂದೆಗೆ ಅದು ಹೆಮ್ಮೆಯ ಕ್ಷಣ, ತನ್ನ ಮಗಳು ತನಗಿಂತ ಮೇಲಿನ ಹುದ್ದೆಗೇರಿದರೆ, ಒಬ್ಬ ತಂದೆಗೆ ಅದಕ್ಕಿಂತ ಹೆಚ್ಚಿನ ಸಾರ್ಥಕತೆ ಇನ್ನೇನಿದೆ ಅಲ್ಲವೇ..?   ಹೌದು, ನಿನ್ನೆ ತೆಲಂಗಾಣದಲ್ಲಿ ಅಂತಹದ್ದೇ ಒಂದು ಕ್ಷಣ ಕಾಣಸಿಕ್ಕಿತು.   ಪೊಲೀಸ್ ಇಲಾಖೆಯಲ್ಲಿ ಮೂರು ದಶಕಕ್ಕೂ ಹೆಚ್ಚಿನ ಸೇವೆ ಸಲ್ಲಿಸಿದ ಅನುಭವ ಇರುವ ಅಪ್ಪ ನಾಲ್ಕು ವರ್ಷದ ಹಿಂದಷ್ಟೇ ಪೊಲೀಸ್ ಇಲಾಖೆಗೆ ಸೇರಿದ ಮಗಳಿಗೆ ಸೆಲ್ಯೂಟ್ ಮಾಡುವ ಅನಿವಾರ್ಯತೆ ಎದುರಾಯಿತು. ಆದರೆ ಆಕ್ಷಣದಲ್ಲಿ ತಂದೆ ಒಂದು ಕ್ಷಣವೂ ಯೋಚಿಸದೆ ತನ್ನ ಮಗಳಿಗೆ ಸೆಲ್ಯೂಟ್ ಮಾಡಿ ಹೆಮ್ಮೆ ಪಟ್ಟಿದ್ದಾರೆ.

ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಹೈದರಾಬಾದ್‌ನ ಹೊರವಲಯದ ಕೊಂಗರ ಕಾಲನ್‌ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆ ವೇಳೆ ಒಂದೇ ಇಲಾಖೆಯಲ್ಲಿರುವ ಅಪ್ಪ- ಮಗಳ ಮುಖಾಮುಖಿಯಾಯಿತು. ಮಲ್ಕಾಜ್‌ಗಿರಿ ಪ್ರದೇಶದ ಡಿಸಿಪಿಯಾದ ಎ.ಆರ್. ಉಮಾಮಹೇಶ್ವರ ಶರ್ಮಾ ಅವರು ತಮ್ಮ ಮೇಲಧಿಕಾರಿಯಾಗಿರುವ ಜಗ್ತಿಯಲ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಗಳು ಸಿಂಧು ಶರ್ಮಾ ಅವರಿಗೆ ಹೆಮ್ಮೆಯಿಂದ ಸೆಲ್ಯೂಟ್ ಮಾಡಿದ್ದಾರೆ. 2014ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸಿಂಧು ಶರ್ಮಾ ಅವರಿಗೆ ತಂದೆ ಅಪ್ಪನ ಹಾದಿಯನ್ನೇ ತುಳಿದ ಮಗಳು ಪೊಲೀಸ್ ಇಲಾಖೆಗೆ ಸೇರಿ ನಾಲ್ಕು ವರ್ಷಗಳಾಗಿವೆಯಷ್ಟೇ.

ಈ ಸಮಯದಲ್ಲಿ ತಮ್ಮ ಖುಷಿಯನ್ನು ಮಾದ್ಯಮದವರೊಂದಿಗೆ ಹಂಚಿಕೊಂಡ ಉಮಾಮಹೇಶ್ವರ ಶರ್ಮಾ ‘ಆಕೆ ನನ್ನ ಹಿರಿಯ ಅಧಿಕಾರಿ. ಆಕೆಯನ್ನು ನೋಡಿದಾಗ ಸೆಲ್ಯೂಟ್ ಹೊಡೆಯುತ್ತೇನೆ. ನಾವು ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತೇವೆ ಮತ್ತು ಅದರ ಬಗ್ಗೆ ಚರ್ಚಿಸುವುದಿಲ್ಲ. ಆದರೆ, ಮನೆಯಲ್ಲಿ ಅಪ್ಪ-ಮಗಳಂತೆ ಇರುತ್ತೇವೆ’, ನಮ್ಮ ಕರ್ತವ್ಯದ ನಡುವೆ ಮೊದಲ ಬಾರಿಗೆ ಪರಸ್ಪರ ಎದುರಾಗಿದ್ದೇವೆ. ಆಕೆಯೊಂದಿಗೆ ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ ಎಂದು ಶರ್ಮಾ ಹೇಳಿದ್ದಾರೆ.

ಮುಂದಿನ ವರ್ಷ ನಿವೃತ್ತರಾಗಲಿರುವ ಉಮಾಮಹೇಶ್ವರ ಶರ್ಮಾ ಸಬ್ ಇನ್‌ಸ್ಪೆಕ್ಟರ್ ಆಗಿ ವೃತ್ತಿ ಬದುಕು ಆರಂಭಿಸಿದ್ದ ಅವರು, ಇತ್ತೀಚೆಗಷ್ಟೇ ಐಪಿಎಸ್ ಶ್ರೇಣಿ ಪಡೆದುಕೊಂಡಿದ್ದರು.

Facebook Comments

Sri Raghav

Admin