ನಿಜಾಮ್ ಮ್ಯೂಸಿಯಂನಲ್ಲಿದ್ದ ರಾಜಮನೆತನದ ಚಿನ್ನದ ಟಿಫನ್ ಬಾಕ್ಸ್ ಕಳವಾಗಿದ್ದು ಹೇಗೆ..?

ಈ ಸುದ್ದಿಯನ್ನು ಶೇರ್ ಮಾಡಿ

Mysury-Maharajas-Tiffan

ಹೈದ್ರಾಬಾದ್, ಸೆ. 4-  ನಿಜಾಮರ ಆಳ್ವಿಕೆಯಲ್ಲಿ ರಾಜಮನೆತನದವರು ಬಳಸುತ್ತಿದ್ದ ಚಿನ್ನದ ಟಿಫನ್ ಬಾಕ್ಸ್ , ಸಾಸರ್ , ಕಪ್ ಹಾಗೂ ಚಮಚಗಳನ್ನು ಚೋರರು ಕಳೆದ ರಾತ್ರಿ ನಿಜಾಮ್ ಮ್ಯೂಸಿಯಂನಲ್ಲಿ ಕಳವು ಮಾಡಿದ್ದಾರೆ.  ಹೈದ್ರಾಬಾದ್‍ನ ಪುರಾಣ ಹಾವೇಲಿಯಲ್ಲಿ ಇರುವ ನಿಜಾಮ್ ಮ್ಯೂಸಿಯಂನಲ್ಲೇ ಚೋರರು ತಮ್ಮ ಕೈಚಳಕವನ್ನು ಪ್ರದರ್ಶಿಸಿರುವುದು ಎಲ್ಲರನ್ನು ಚಕಿತಗೊಳಿಸಿದೆ.  ಮೀರ್ ಚೌಕ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಚೋರರ ಪತ್ತೆಗೆ ಬಲೆಬೀಸಿದ್ದಾರೆ.

ಘಟನೆ ವಿವರ:

ನಿಜಾಮ್ ರಾಜಮನೆತನದ ಕುಟುಂಬಸ್ಥರು ಬಳಸುತ್ತಿದ್ದ ಲಕ್ಷಾಂತರ ಬೆಲೆಬಾಳುವ ಚಿನ್ನದ ಟಿಫನ್ ಬಾಕ್ಸ್ ಅನ್ನು ದೋಚಲು ಹಲವು ದಿನಗಳಿಂದಲೂ ಸ್ಕೆಚ್ ಹಾಕಿದ್ದು ಕಳೆದ ಭಾನುವಾರವೂ ಕಳವಿಗೆ ಯತ್ನಿಸಿ ವಿಫಲರಾಗಿದ್ದಾರೆ. ಆದರೆ ಕಳೆದ ರಾತ್ರಿ ಸಿನಿಮೀಯ ರೀತಿಯಲ್ಲಿ ಮ್ಯೂಸಿಯಂನ ಮೊದಲ ಮಹಡಿಯ ಕಿಟಕಿಯ ಕಬ್ಬಿಣದ ಗ್ರಿಲ್‍ಗಳನ್ನು ಮುರಿದು ಒಳನುಗ್ಗಿ ರುವ ಚೋರರು ಕೈಚಳಕವನ್ನು ತೋರಿಸಿದ್ದಾರೆ. ಕಳವು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹೈದ್ರಾಬಾದ್‍ನ ಪೊಲೀಸ್ ಕಮೀಷನರ್ ಅಂಜನಿಕುಮಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸಿಸಿಟಿವಿ ಫುಟೇಜ್ ಅನ್ನು ಪರಿಶೀಲಿಸಿದ್ದಾರೆ.

ನಿಜಾಮರು ಬಳಸುತ್ತಿದ್ದ ಟಿಫನ್ ಬಾಕ್ಸ್, ಕಪ್, ಸಾಸರ್ , ಚಮಚಗಳು ಸೇರಿದಂತೆ ಆಳ್ವಿಕೆಯಲ್ಲಿ ರಾಜಮನೆತನದವರು ಬಳಸುತ್ತಿದ್ದ ವಸ್ತುಗಳನ್ನು ಕೂಡ ಈ ಮ್ಯೂಸಿಯಂನಲ್ಲಿ ಇಡಲಾಗಿತ್ತು. ಇವೇ ಅಲ್ಲದೆ ನಿಜಾಮರ ಮನೆತನದವರಾದ ಮೀರ್ ಒಸಮಾ ಅಲಿಖಾನ್ ಸೇರಿದಂತೆ ನಂತರದ 6ನೆ ರಾಜರ ಅಳ್ವಿಕೆಯಲ್ಲಿ ನೆರೆ ರಾಜ್ಯದ ರಾಜರು ನೀಡಿದ್ದ ಉಡುಗೊರೆಗಳು, 1930ರಲ್ಲಿ ಚಾಲ್ತಿಯಲ್ಲಿದ್ದ ರೋಲ್ಸ್ ರಾಯ್ ಕಾರುಗಳನ್ನು ಈ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.
2000ರಲ್ಲಿ ನಿಜಾಮದ ಕುಟುಂಬಸ್ಥರು ಈ ಮ್ಯೂಸಿಯಂ ಅನ್ನು ಸ್ಥಾಪನೆ ಮಾಡಿದ್ದು ಹೈದ್ರಾಬಾದ್‍ನಲ್ಲಿ ನಿಜಾಮ್ ಮ್ಯುಸಿಯಂ ಆಕರ್ಷಕ ಸ್ಥಳವಾಗಿ ಗುರುತಿಸಿಕೊಂಡಿದೆ. ಈ ಮ್ಯೂಸಿಯಂನಲ್ಲಿ 450 ಕ್ಕೂ ಹೆಚ್ಚು ಬೆಲೆಬಾಳುವ ವಸ್ತುಗಳನ್ನಿಟ್ಟಿದ್ದು ಇವುಗಳ ಮೌಲ್ಯ 250 ಕೋಟಿಯಿಂದ 500 ಕೋಟಿಯವರೆಗೂ ಬೆಲೆ ಬಾಳುತ್ತದೆ ಎಂದು ತಿಳಿದು ಬಂದಿದೆ.

Facebook Comments

Sri Raghav

Admin