ಗನ್ ಮ್ಯಾನ್ ನಿಂದ ಶೂ ಮತ್ತು ಪ್ಯಾಂಟ್‍ ಕ್ಲೀನ್ ಮಾಡಿಸಿಕೊಂಡ ಡಿಸಿಎಂ..!

ಈ ಸುದ್ದಿಯನ್ನು ಶೇರ್ ಮಾಡಿ

DCM--011
ಬೆಂಗಳೂರು, ಸೆ.4-ನಗರ ಪ್ರದಕ್ಷಿಣೆ ವೇಳೆ ರಾಜಕಾಲುವೆ ಬಳಿಯ ಕೊಳಚೆಯಿಂದಾಗಿ ಡಿಸಿಎಂ ಪರಮೇಶ್ವರ್ ಅವರ ಶೂ ಮತ್ತು ಪ್ಯಾಂಟ್‍ಗೆ ಹಾರಿದ್ದ ಕೊಳಚೆಯನ್ನು ಅಂಗರಕ್ಷಕರು ಸ್ವಚ್ಛಗೊಳಿಸಿದ್ದರಿಂದ ಇರಿಸು-ಮುರಿಸಾದ ಪ್ರಸಂಗ ನಡೆಯಿತು. ಇಂದು ಬೆಳಗ್ಗೆ ಪರಮೇಶ್ವರ್ ಅವರು ನಗರಪ್ರದಕ್ಷಿಣೆ ಆರಂಭಿಸಿದಾಗ ಹಲಸೂರಿನ ರಾಜಕಾಲುವೆ ಪರಿಶೀಲಿಸಿ ಅಲ್ಲಿ ತುಂಬಿದ್ದ ಕೊಳಚೆ ನಿರ್ಮೂಲನೆಗೆ ಅಧಿಕಾರಿಗಳಿಗೆ ಸೂಚಿಸಿದ ವೇಳೆ ಸ್ಥಳದಲ್ಲಿನ ಕೊಚ್ಚೆ ಅವರ ಶೂ ಮತ್ತು ಪ್ಯಾಂಟ್‍ಗೆ ತಗುಲಿ ಕೊಳಕಾಗಿತ್ತು.

ಇದನ್ನು ಗಮನಿಸಿದ ಸ್ಥಳೀಯರು ಅದನ್ನು ಸ್ವಚ್ಛಗೊಳಿಸಲು ಮುಂದಾದಾಗ ಪರಮೇಶ್ವರ್ ನಿರಾಕರಿಸಿದರು. ನಂತರ ಅಂಗರಕ್ಷಕರೊಬ್ಬರು ಬಾಟಲಿಯಲ್ಲಿ ನೀರು ತೆಗೆದುಕೊಂಡು ಬಂದು ಅವರ ಶೂ ಮತ್ತು ಪ್ಯಾಂಟ್‍ನ್ನು ಸ್ವಚ್ಛಗೊಳಿಸಿದರು. ಈ ದೃಶ್ಯ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin