ನಕಲಿ ಎಟಿಎಂ ಕಾರ್ಡ್‍ಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ಉಗಾಂಡ ಮೂಲದ ಖದೀವರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Uganda--01

ಬೆಂಗಳೂರು, ಸೆ.5-ನಕಲಿ ಎಟಿಎಂ ಕಾರ್ಡ್‍ಗಳನ್ನು ತಯಾರಿಸಿ ಬ್ಯಾಂಕ್ ಗ್ರಾಹಕರ 25 ಲಕ್ಷ ಕ್ಕೂ ಅಧಿಕ ಹಣವನ್ನು ಡ್ರಾ ಮಾಡಿ ವಂಚಿಸಿದ್ದ ಉಗಾಂಡ ದೇಶದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕೊತ್ತನೂರು ಠಾಣೆ ಪೊಲೀಸರು, ಲ್ಯಾಪ್‍ಟಾಪ್, 20 ಎಟಿಎಂ ಕಾರ್ಡ್, 9 ಮೊಬೈಲ್ ಫೋನ್, 60 ಸಾವಿರ ರೂ.ನಗದು ಸೇರಿದಂತೆ ಇನ್ನಿತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊತ್ತನೂರಿನ ಎಸ್.ಆರ್.ಕೆ. ನಗರದ ಕೆಂಪೇಗೌಡನಗರದ 1ನೇ ಕ್ರಾಸ್‍ನಲ್ಲಿ ನೆಲೆಸಿದ್ದ ಬಬಲಂದಾ ಅಮುನೊನ್ (25) ಹಾಗೂ ಎಂ.ಎಸ್.ಪಾಳ್ಯ ರಾಜೀವ್ ಗಾಂಧಿ ನಗರದ 2ನೆ ಕ್ರಾಸ್ ನಿವಾಸಿ ಒಂಡಿಗೊ ಆಂಬ್ರೋಸ್ (22) ಬಂಧಿತ ಆರೋಪಿಗಳು. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳ ಬಂಧನದಿಂದ ಕೊತ್ತನೂರು ಪೊಲೀಸ್ ಠಾಣೆ ಮತ್ತು ನಗರದ ಇತರ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದಿದ್ದ 20ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಇವರು ಬೆಂಗಳೂರು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತಿತರ ಕಡೆಗಳಲ್ಲಿ ನಕಲಿ ಎಟಿಎಂ ಕಾರ್ಡ್‍ಗಳನ್ನು ಬಳಸಿ ಸಾರ್ವಜನಿಕರ ಸುಮಾರು 25 ಲಕ್ಷಕ್ಕೂ ಹೆಚ್ಚು ಹಣವನ್ನು ಡ್ರಾ ಮಾಡಿ ಮೋಸ ಮಾಡಿದ್ದರು.

ಆರೋಪಿಗಳು ಆ.28ರಂದು ಸಂಜೆ 4.30ರ ವೇಳೆ ಹೆಗಡೆ ನಗರ ವೃತ್ತದಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಒಳಗೆ ಮೈಕ್ರೋ ಕ್ಯಾಮರಾ ಪ್ಲೇಟ್ ಅಳವಡಿಸುತ್ತಿದ್ದಾಗ ಅನುಮಾನಗೊಂಡ ಗಸ್ತಿನಲ್ಲಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.  ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಇವರು ಹೆಗಡೆನಗರ, ಎಂ.ಎಸ್.ಪಾಳ್ಯ, ಕೊತ್ತನೂರು ಮುಖ್ಯರಸ್ತೆ, ಗೆದ್ದಲಹಳ್ಳಿ ಹಾಗೂ ನಗರದ ಇನ್ನೂ ಹಲವು ಕಡೆ, ಮತ್ತು ಆಂಧ್ರಪ್ರದೇಶ, ಮಹಾರಾಷ್ಟ್ರ ಮುಂತಾದ ಕಡೆಗಳಲ್ಲಿಯೂ ಎಟಿಎಂ ಕೇಂದ್ರಗಳಲ್ಲಿ ನಕಲಿ ಎಟಿಎಂ ಬಳಸಿ ಹಣ ಡ್ರಾ ಮಾಡಿಕೊಂಡಿರುವುದು ತಿಳಿದುಬಂದಿದೆ.

ಆರೋಪಿಗಳು ಎಟಿಎಂ ರೀಡ್ ಮಾಡುವ ಸ್ಕಿಮ್ಮರ್ ಮತ್ತು ಎಟಿಎಂ ಪಿನ್ ಕಾರ್ಡ್ ರೀಡ್ ಮಾಡುವ ಚಿಪ್ ಹೊಂದಿರುವ ಮೈಕ್ರೋ ಕ್ಯಾಮರಾ ಪ್ಲೇಟ್‍ಗಳನ್ನು ಮೊದಲು ಎಟಿಎಂಗೆ ಅಳವಡಿಸುತ್ತಿದ್ದರು. ಲ್ಯಾಪ್‍ಟಾಪ್‍ನ ಸಾಫ್ಟ್‍ವೇರ್ ಮೂಲಕ ಕ್ಯಾಮರಾ ಪ್ಲೇಟ್‍ನ ಡಾಟಾವನ್ನು ನಕಲಿ ಎಟಿಎಂ ಕಾರ್ಡ್‍ಗೆ ರವಾನಿಸಿ ನಂತರ ಎಟಿಎಂಗಳಿಗೆ ಹೋಗಿ ಗ್ರಾಹಕರ ಹಣ ಡ್ರಾ ಮಾಡಿಕೊಂಡು ವಂಚಿಸುತ್ತಿದ್ದರು ಎಂಬುದನ್ನು ವಿಚಾರಣೆಯ ವೇಳೆ ಬಾಯ್ಬಿಬಿಟ್ಟಿದ್ದಾರೆ.

ಆರೋಪಿಗಳಿಂದ ಎರಡು ಲ್ಯಾಪ್‍ಟಾಪ್, ಡೇಟಾ ನಕಲಿ ಎಟಿಎಂ ಕಾರ್ಡ್‍ಗೆ ವರ್ಗಾಯಿಸುವ ಎರಡು ಯಂತ್ರ, ನಾಲ್ಕು ಎಟಿಎಂ ಕಾರ್ಡ್ ಸ್ಕಿಮ್ಮರ್ ಪ್ಲೇಟ್, ಎರಡು ಚಿಪ್, ಮೈಕ್ರೋ ಕ್ಯಾಮರಾ ಪ್ಲೇಟ್, ಬ್ಯಾಟರಿಗಳು, ಎಂಟಿಎಸ್, ಏರ್‍ಟೆಲ್ ಕಂಪನಿಯ ಇಂಟರ್ ನೆಟ್ ಡಾಂಗಲ್, 9 ಮೊಬೈಲ್ ಫೆÇೀನ್, ಪಿನ್ ಹೊಂದಿರುವ 20 ಎಟಿಎಂ ಕಾರ್ಡ್, 60 ಖಾಲಿ ಕಾರ್ಡ್, ಬಿಳಿ ಬಣ್ಣದ 100 ಎಟಿಎಂ ಕಾರ್ಡ್ ಇರುವ ಬಂಡಲ್, 60 ಸಾವಿರ ರೂ.ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಹೋಂಡಾ ಡಿಯೋ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Facebook Comments

Sri Raghav

Admin