ವಿಧಾನಸೌಧ ಹಾಸನಕ್ಕೆ ಶಿಫ್ಟಾದರೂ ಅಚ್ಚರಿಯಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

BHJP-Karnataka--01

ಬೆಂಗಳೂರು,ಸೆ.5- ಕೆಶಿಪ್ ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರ ಮಾಡಿರುವ ಮೈತ್ರಿ ಸರ್ಕಾರವನ್ನು ಟೀಕಿಸಿ ಬಿಜೆಪಿ ಟ್ವೀಟ್ ಮಾಡಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಈಗ ಕೆಶಿಪ್ ಕಚೇರಿಯನ್ನು ಬೆಳಗಾವಿಯಿಂದ ಹಾಸನಕ್ಕೆ ಶಿಫ್ಟ್ ಮಾಡಿದೆ. ಮುಂದೆ ವಿಧಾನ ಸೌಧವನ್ನೂ ಹಾಸನಕ್ಕೆ ಸ್ಥಳಾಂತರಿಸಿದರೆ ಅಚ್ಚರಿಪಡಬೇಕಾಗಿಲ್ಲ ಎಂದು ವ್ಯಂಗ್ಯವಾಡಿದೆ.  ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಉಳಿದೆಲ್ಲ ಜಿಲ್ಲೆಗಳ ಸೌಕರ್ಯಗಳು, ಅಭಿವೃದ್ಧಿ ಕಾರ್ಯಗಳು ಮಂಡ್ಯ, ಹಾಸನ, ರಾಮನಗರಗಳಿಗೆ ವರ್ಗಾವಣೆಯಾಗುತ್ತಿವೆ ಎಂದು ಟ್ವೀಟ್ ಮಾಡಿದೆ.

Facebook Comments

Sri Raghav

Admin