ಕಾಶ್ಮೀರದ ಯುವಕರನ್ನು ಪ್ರಚೋದಿಸುತ್ತಿದ್ದ ಹಿಜ್ಬುಲ್ ಉಗ್ರನ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

militory

ಜಮ್ಮು, ಸೆ.5 (ಪಿಟಿಐ)- ಹಿಜ್ಬುಲ್ ಮುಜಾಹಿದ್ಧೀನ್(ಎಚ್‍ಎಂ) ಉಗ್ರಗಾಮಿ ಸಂಘಟನೆಯ ಭಯೋತ್ಪಾದಕನೊಬ್ಬನನ್ನು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.  ತೌಸೀಫ್ ಅಹಮದ್ ಗುಡ್ನಾ ಅಲಿಯಾಸ್ ಅಬು ಬಕರ್ ಬಂಧಿತ ಉಗ್ರಗಾಮಿ. ಖಚಿತ ಸುಳಿವಿನ ಮೇರೆಗೆ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಚ್‍ಎಂ ಸಂಘಟನೆಯೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದ ಈತ, ಆ ಬಣಕ್ಕೆ ಸೇರುವಂತೆ ಕಾಶ್ಮೀರದ ಯುವಕರನ್ನು ಪ್ರಚೋದಿಸುತ್ತಿದ್ದ. ಅಲ್ಲದೇ ಕಿಶ್ತ್ವಾರ್ ಗ್ರಾಮದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಪುನಃಶ್ಚೇತನಗೊಳ್ಳಲು ನೆರವಾಗಿದ್ದ.  ಕಾಶ್ಮೀರದಲ್ಲಿ ಗ್ರೆನೇಡ್ ಆಕ್ರಮಣಗಳನ್ನು ನಡೆಸಲು ಹಾಗೂ ಉಗ್ರಗಾಮಿ ಚಟುವಟಿಕೆಗಳನ್ನು ತೀವ್ರಗೊಳಿಸಲು ಹಿಜ್ಬುಲ್ ಸಂಘಟನೆ ಕುತಂತ್ರ ರೂಪಿಸಿದೆ ಎಂಬ ಸಂಗತಿ ಬಯಲಾದ ಬೆನ್ನಲ್ಲೇ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ವಕ್ತಾರರು ತಿಳಿಸಿದ್ದಾರೆ.  ಇತ್ತೀಚೆಗೆ ಬಂಧಿತರಾದ ಇಬ್ಬರು ಎಚ್‍ಎಂ ಉಗ್ರರು ವಿಚಾರಣೆ ವೇಳೆ ನೀಡಿದ ಮಾಹಿತಿಯನ್ನು ಅನುಸರಿಸಿ ಗುಡ್ನಾನನ್ನು ಬಂಧಿಸಲಾಗಿದೆ.

Facebook Comments

Sri Raghav

Admin