ಐಎಸ್‍ಎಸ್‍ಎಫ್’ನಲ್ಲಿ ಭಾರತೀಯ ಶೂಟರ್’ಗಳ ಪದಕ ಬೇಟೆ : ದಿವ್ಯಾಂಶ್, ಶ್ರೇಯಾಗೆ ಕಂಚು

ಈ ಸುದ್ದಿಯನ್ನು ಶೇರ್ ಮಾಡಿ

Shooting--01
ಚಾಂಗ್‍ವೊನ್, ಸೆ.5 (ಪಿಟಿಐ)- ದಕ್ಷಿಣ ಕೊರಿಯಾ ಚ್ಯಾಂಗ್‍ವೊನ್‍ನಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ವಿಶ್ವಚಾಂಪಿಯನ್‍ಶಿಪ್‍ನಲ್ಲಿ ಭಾರತೀಯ ಶೂಟರ್‍ಗಳ ಪದಕ ಬೇಟೆ ಮುಂದುವರಿದಿದೆ. 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಕಿರಿಯರ ಸ್ಫರ್ಧೆಯಲ್ಲಿ ದಿವ್ಯಾಂಶ ಸಿಂಗ್ ಪನ್ವರ್ ಹಾಗೂ ಶ್ರೇಯಾ ಅಗರ್‍ವಾಲ್ ತೃತೀಯ ಸ್ಥಾನ ಗಳಿಸುವ ಮೂಲಕ ಕಂಚು ಪದಕ ಗೆದ್ದಿದ್ದಾರೆ.

ಈ ಚಾಂಪಿಯನ್‍ಶಿಪ್‍ನಲ್ಲಿ ಭಾರತ ಈವರೆಗೆ ತಲಾ ಮೂರು ಬಂಗಾರ, ರಜತ ಮತ್ತು ಕಂಚು ಪದಕಗಳನ್ನು ಗೆದ್ದಿದೆ. 42 ತಂಡಗಳ ಪೈಕಿ 834.4 ಸ್ಕೋರ್‍ಗಳೊಂದಿಗೆ ಐದನೇ ಮತ್ತು ಅಂತಿಮ ಹಂತಕ್ಕೆ ಅರ್ಹತೆ ಪಡೆದಿದ್ದ ಈ ಜೋಡಿ ಫೈನಲ್‍ನಲ್ಲಿ ಕಂಚು ಗೆದ್ದು ಸಂಭ್ರಮಿಸಿದ್ದಾರೆ. ಇಟಲಿಯ ಸೋಫಿಯಾ ಬೆನೆಟ್ಟಿ ಮತ್ತು ಮಾರ್ಕ್ ಸುಪ್ಪಾನಿ ಹಾಗೂ ಇರಾನ್‍ನ ಸಾಡೆಘಿಯಾನ್ ಅರ್ಮಿನಾ ಮತ್ತು ಮಹಮದ್ ಅಮಿರ್ ನೆಕೌನಮ್ ಅನುಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.

ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೊಂದು ಜೋಡಿ ಎಲಾವೆನಿಲ್ ವಲಾರಿವನ್ ಮತ್ತು ಹೃದಯ್ ಹಜÁರಿಕಾ ಜೋಡಿ 13ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಪುರುಷರ 50 ಮೀಟರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‍ನಲ್ಲಿ ಭಾರತೀಯ ಶೂಟರ್ ಓಂ ಪ್ರಕಾಶ್ ಮಿಥರ್‍ವಾಲ್ ನಿನ್ನೆ ಚಿನ್ನದ ಸಾಧನೆ ಮಾಡಿದ್ದರು.
ಭಾರತೀಯ ಶೂಟರ್‍ಗಳಾದ ಅಂಜುಂ ಮËಡ್ಗಿಲ್ ಮತ್ತು ಅಪೂರ್ವಿ ಚಾಂದೆಲಾ 2020ರಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯುವ ಮೂಲಕ ದೇಶಕ್ಕೆ ಹೆಮ್ಮೆಪಡುವಂತಾಗಿದೆ.

Facebook Comments

Sri Raghav

Admin