ರಿಯಲ್‍ಮಿ2 ಸ್ಮಾರ್ಟ್‍ಫೋನ್ ಬಿಡುಗಡೆ : ಬೆಲೆ ಎಷ್ಟು..? ವಿಶೇಷತೆಗಳೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Real-Me--01

ಬೆಂಗಳೂರು, ಸೆ.5- ಉನ್ನತ ಗುಣಮಟ್ಟದ ಸ್ಮಾರ್ಟ್‍ಫೋನ್‍ಗಳನ್ನು ಪೂರೈಸುವ ಸ್ಮಾರ್ಟ್‍ಫೋನ್ ಬ್ರಾಂಡ್ ಆದ ರಿಯಲ್‍ಮಿ ಈಗ 2ನೇ ಉಪಕರಣವಾದ ರಿಯಲ್‍ಮಿ2 ಅನ್ನು ಬಿಡುಗಡೆ ಮಾಡಿದೆ.  ಪ್ರತ್ಯೇಕವಾಗಿ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯವಾಗುತ್ತಿರುವ ರಿಯಲ್‍ಮಿ2 ನಾಚ್ ಫುಲ್ ಸ್ಕ್ರೀನ್ ಅನ್ನು 10,000 ರೂ.ಗಳಿಗೂ ಕಡಿಮೆ ಬೆಲೆಯ ವರ್ಗದಲ್ಲಿ ಮೊದಲ ಬಾರಿಗೆ ಸಾದರಪಡಿಸುತ್ತಿದೆ.

ಶಕ್ತಿ ಮತ್ತು ಶೈಲಿಯ ಸಂಗಮದ ಉತ್ಪನ್ನ ತತ್ವವನ್ನು ಒಳಗೊಂಡಿರುವ ರಿಯಲ್‍ಮಿ2 ಇತರೆ ಫೋನ್‍ಗಳಿಗಿಂತ ಒಂದು ಪಟ್ಟು ಮೇಲಿದ್ದು, ಎಐ ಪವರ್ಡ್ 4,230ಎಂಎಎಚ್ ಬ್ಯಾಟರಿ ಜೊತೆಗೆ 13+2 ಡ್ಯುಯೆಲ್‍ರೇರ್ ಕ್ಯಾಮರಾಗಳನ್ನು ಇದು ಹೊಂದಿದೆ.  ಮೂರು ವಿಶೇಷ ಶೈಲಿಯ ಬಣ್ಣಗಳಾದ ಡೈಮಂಡ್ ಬ್ಲ್ಯಾಕ್, ಡೈಮಂಡ್‍ರೆಡ್ ಮತ್ತು ಡೈಮಂಡ್ ಬ್ಲ್ಯೂ ವರ್ಣಗಳಲ್ಲಿ ಹಾಗೂ ಎರಡು ಆವೃತ್ತಿಗಳಾದ 3ಜಿಬಿ ರ್ಯಾಮ್+32ಜಿಬಿ ರಾಮ್ ಬೆಲೆ ರೂ. 8,990 ಮತ್ತು 4ಜಿಬಿ ರ್ಯಾಮ್+64ಜಿಬಿ ರಾಮ್ ಬೆಲೆ ರೂ. 10,990 ದರಗಳಲ್ಲಿ ಲಭ್ಯವಿರುತ್ತದೆ.

Real-me

 

ಡೈಮಂಡ್ ಬ್ಲ್ಯಾಕ್ ಮತ್ತು ಡೈಮಂಡ್ ರೆಡ್ ಆವೃತ್ತಿಗಳು ಪ್ರತ್ಯೇಕವಾಗಿ ಫ್ಲಿಪ್‍ಕಾರ್ಟ್‍ನಲ್ಲಿ ಇಂದಿನಿಂದ ಲಭ್ಯವಾಗಲಿದ್ದು, ಡೈಮಂಡ್ ಬ್ಲ್ಯೂಇದೇ ವರ್ಷ ಅಕ್ಟೋಬರ್ ಆರಂಭದಲ್ಲಿ ಲಭ್ಯವಾಗಲಿದೆ ಎಂದು ರಿಯಲ್‍ಮಿ ಇಂಡಿಯಾದ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಮಾಧವ್ ಸೇಥ್ ತಿಳಿಸಿದ್ದಾರೆ.

Facebook Comments

Sri Raghav

Admin