ಮುಂದಿನ ವಾರ ಸುಪ್ರೀಂನಲ್ಲಿ ರಫೇಲ್ ಒಪ್ಪಂದ ಕುರಿತ ಪಿಐಎಲ್ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

supreme-ocurt
ನವದೆಹಲಿ, ಸೆ.5 (ಪಿಟಿಐ)-ಭಾರತ ಮತ್ತು ರಷ್ಯಾ ನಡುವೆ ನಡೆದಿರುವ ರಫೇಲ್ ಯುದ್ಧ ವಿಮಾನಗಳ ವಿವಾದಿತ ಖರೀದಿ ಒಪ್ಪಂದಕ್ಕೆ ತಡೆ ಕೋರಿ ಸಲ್ಲಿಸಲಾದ ಸಾರ್ವನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ವಾರ ಕೈಗೆತ್ತಿಕೊಳ್ಳಲಿದೆ.  ಈ ಕುರಿತು ಹಿರಿಯ ವಕೀಲ ಎಂ.ಎಲ್.ಶರ್ಮ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು, ತುರ್ತು ವಿಚಾರಣೆ ನಡೆಸಲು ಸಮ್ಮತಿಸಿದೆ. ಮುಂದಿನ ವಾರ ಈ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಪೀಠ ತಿಳಿಸಿದೆ. ಭಾರತ ಮತ್ತು ಫ್ರಾನ್ಸ್ ನಡುವೆ 59,000 ಕೋಟಿ ರೂ.ಗಳ ಮೊತ್ತದ ರಫೇಲ್ ಜೆಟ್ ವಿಮಾನಗಳ ಖರೀದಿ ಒಪ್ಪಂದದಲ್ಲಿ ಅಕ್ರಮ ಅವ್ಯವಹಾರ ನಡೆದಿದೆ. ಈ ಒಪ್ಪಂದಕ್ಕೆ ತಡೆಯಾಜ್ಞೆ ನೀಡಬೇಕೆಂದು ಶರ್ಮ ಪಿಐಎಲ್‍ನಲ್ಲಿ ಮನವಿ ಮಾಡಿದ್ದರು.

Facebook Comments

Sri Raghav

Admin