ಹಣ ಡ್ರಾ ಮಾಡಲು ಸಹಾಯ ಕೇಳಿದ ಮಹಿಳೆಗೆ ವಂಚನೆ, 20 ಸಾವಿರ ಹಣ ಪಡೆದು ಅಪರಿಚಿತ ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

ATM-A0141

ಬೆಂಗಳೂರು, ಸೆ.5-ಎಟಿಎಂ ಕೇಂದ್ರದಿಂದ ಹಣ ಡ್ರಾ ಮಾಡಿಕೊಡುವಂತೆ ಸಹಾಯ ಕೇಳಿದ ಮಹಿಳೆಯೊಬ್ಬರ ಕಾರ್ಡ್ ಮತ್ತು ಪಿನ್ ಸಂಖ್ಯೆ ಪಡೆದು 20 ಸಾವಿರ ರೂ.ಡ್ರಾ ಮಾಡಿ ವಂಚಿಸಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ. ಪೀಣ್ಯದ ಸರೋಜಮ್ಮ ಎಂಬವರು ನಿನ್ನೆ ಪೀಣದ ಎಟಿಎಂ ಕೇಂದ್ರವೊಂದಕ್ಕೆ ಹಣ ಡ್ರಾ ಮಾಡಲು ಹೋಗಿದ್ದರು. ಆದರೆ ಅವರಿಗೆ ಹಣ ಡ್ರಾ ಮಾಡಲು ಸಾಧ್ಯವಾಗಿಲ್ಲ. ಆಗ ಅಲ್ಲೇ ಇದ್ದ ಅಪರಿಚಿತ ವ್ಯಕ್ತಿಯೊಬ್ಬರಿಗೆ ಹಣ ಡ್ರಾ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಸರೋಜಮ್ಮ ಅವರಿಂದ ಎಟಿಎಂ ಕಾರ್ಡ್ ಹಾಗೂ ಪಿನ್ ಸಂಖ್ಯೆಯನ್ನು ಪಡೆದುಕೊಂಡ ಅಪರಿಚಿತ ವ್ಯಕ್ತಿ, 20 ಸಾವಿರ ರೂ. ಡ್ರಾ ಮಾಡಿಕೊಂಡು, ಅದನ್ನು ಅಡಗಿಸಿಟ್ಟು, ಈ ಎಟಿಎಂ ಸರಿಯಿಲ್ಲ, ಬೇರೆ ಎಟಿಎಂಗೆ ಹೋಗಿ ಎಂದು ಹೇಳಿ ಪರಾರಿಯಾಗಿದ್ದಾನೆ. ಮಹಿಳೆ ಬೇರೆ ಎಟಿಎಂಗೆ ಹೋಗಿ ಮತ್ತೊಬ್ಬ ವ್ಯಕ್ತಿಯ ಸಹಾಯ ಪಡೆದು ಹಣ ಡ್ರಾ ಮಾಡಲು ಮುಂದಾದಾಗ 10 ನಿಮಿಷದ ಮೊದಲು 20 ಸಾವಿರ ರೂ.ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸರೋಜಮ್ಮ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯ ಪೊಲೀಸರು, ಆರೋಪಿಯ ಪತ್ತೆಗೆ ಬಲೆಬೀಸಿದ್ದಾರೆ.

Facebook Comments

Sri Raghav

Admin