ಬ್ರಹ್ಮಪುತ್ರ ನದಿಯಲ್ಲಿ 45 ಜನರಿದ್ದ ನೌಕೆ ಮುಳುಗಿ ಇಬ್ಬರ ಸಾವು, ಕೆಲವರು ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

SDRF

ಗುವಾಹತಿ, ಸೆ. 6 (ಪಿಟಿಐ)- ಈಶಾನ್ಯ ರಾಜ್ಯ ಅಸ್ಸಾಂ ರಾಜಧಾನಿ ಗುವಾಹತಿಯ ಉತ್ತರ ಭಾಗದ ಬ್ರಹ್ಮಪುತ್ರ ನದಿಯಲ್ಲಿ ನಿನ್ನೆ ದೋಣಿಯೊಂದು ಮುಳುಗಿ ಇಬ್ಬರು ಮೃತಪಟ್ಟು, ಕೆಲವರು ಕಣ್ಮರೆಯಾಗಿದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯ ಮುಂದುವರಿದಿದೆ.  ದುರಂತಕ್ಕೀಡಾದ ದೋಣಿ 45 ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿತ್ತು. ಇದರಲ್ಲಿ ಮಹಿಳೆಯರ ಮತ್ತು ಮಕ್ಕಳು ಸಹ ಇದ್ದರು. ಅಲ್ಲದೇ 18 ಮೋಟಾರ್ ಸೈಕಲ್‍ಗಳನ್ನು ಕೊಂಡೊಯ್ಯುತ್ತಿತ್ತು.

22 ಸಾಮಥ್ರ್ಯದ ಈ ನೌಕೆ ಉತ್ತರ ಗುವಾಹತಿಯಿಂದ ಮಧ್ಯಮ್ ಖಂಡಾಗೆ ತೆರಳುತ್ತಿದ್ದಾಗ ಬಂಡೆಯೊಂದಕ್ಕೆ ಬಡಿದು ಎಂಜಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ದೋಣಿ ಕಿಕ್ಕಿದಿದ್ದ ಕಾರಣ ನಿನ್ನೆ ಮಧ್ಯಾಹ್ನ 2 ಗಂಟೆಯಲ್ಲಿ ಮುಳುಗಡೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 12 ಪ್ರಯಾಣಿಕರು ಸುರಕ್ಷಿತವಾಗಿ ಈಜಿ ದಡ ಸೇರಿದರು. ಇನ್ನೂ ಕೆಲವರು ನಾಪತ್ತೆಯಾಗಿದ್ದು, ರಾಜ್ಯ ವಿಪತ್ತು ಸ್ಪಂದನೆ ಪಡೆ(ಎಸ್‍ಡಿಅರ್‍ಎಫ್) ಕಣ್ಮರೆಯಾದವರಿಗೆ ಶೋಧ ಮುಂದುವರಿಸಿದೆ.

Facebook Comments

Sri Raghav

Admin