ಕುದುರೆ ರೇಸ್‍ಗಾಗಿ ಚಿಕ್ಕಪ್ಪನ ಮನೆ ದೋಚಿದ್ದ ಈ ಭೂಪ..!

ಈ ಸುದ್ದಿಯನ್ನು ಶೇರ್ ಮಾಡಿ

Police--01

ಬೆಂಗಳೂರು, ಸೆ.6- ಕುದುರೆ ರೇಸ್‍ಗೆ ಹಣ ಕಟ್ಟಲು ಸಾಲ ಮಾಡಿಕೊಂಡಿದ್ದ ವ್ಯಕ್ತಿ ಸಾಲ ತೀರಿಸಲು ತನ್ನ ಚಿಕ್ಕಪ್ಪನ ಮನೆಯಲ್ಲೇ ಕಳ್ಳತನ ಮಾಡಿ ಇದೀಗ ಶ್ರೀರಾಮಪುರ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾನೆ. ಶ್ರೀರಾಮಪುರದ ಗೌತಮ್‍ನಗರದ ನಿವಾಸಿ ಉದಯ್‍ಶಂಕರ್ (33) ಬಂಧಿತ ಆರೋಪಿಯಾಗಿದ್ದು, ಈತನಿಂದ 20 ಲಕ್ಷ ರೂ ಬೆಲೆ ಬಾಳುವ 726 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಉದಯ್‍ಕುಮಾರ್ ಕುದುರೆ ರೇಸ್ ಆಟದಲ್ಲಿ ಸೋತು ಹೆಚ್ಚಿನ ಸಾಲ ಮಾಡಿಕೊಂಡಿದ್ದರಿಂದ ಸಾಲ ತೀರಿಸಲು ತಮ್ಮ ಚಿಕ್ಕಪ್ಪನ ಬಳಿ ವಡವೆ ಹಾಗೂ ಹಣ ಇರುವುದನ್ನು ತಿಳಿದುಕೊಂಡು ಬೀರುವಿನ ಕೀ ಕದ್ದು ನಕಲಿ ಕೀ ಮಾಡಿಸಿಕೊಂಡಿದ್ದನು.

ತದನಂತರ ಚಿಕ್ಕಪ್ಪನ ಮನೆಗೆ ಹೋಗಿ ಬೀರುವಿನ ಕೀ ತೆಗೆದು ಹಣ ಮತ್ತು ಆಭರಣವನ್ನು ಕಳ್ಳತನ ಮಾಡಿದ್ದನು. ಆ.23ರಂದು ಗೌತಮ್‍ನಗರದ ನಿವಾಸಿ, ಆರೋಪಿಯ ಚಿಕ್ಕಪ್ಪ ಹರಿ ಎಂಬುವರು ತಮ್ಮ ಮನೆಯಲ್ಲಿ ಹಣ, ಆಭರಣ ಕಳ್ಳತನವಾಗಿದೆ ಎಂದು ದೂರಿದ್ದರು.  ಮನೆ ಕಳವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಇವರ ಮನೆಗೆ ಯಾರ್ಯಾರು ಬಂದು ಹೋಗಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿ, ಸಂಬಂಧಿಕನಾದ ಉದಯ್‍ಕುಮಾರ್‍ನನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Facebook Comments

Sri Raghav

Admin