ಗೌಡರ ಫ್ಯಾಮಿಲಿ ನೇಪಾಳ ಪ್ರವಾಸ, ಪಶುಪತಿ ದೇವಾಲಯದಲ್ಲಿ ಸ್ಪೆಷಲ್ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

Devegowda--01
ಬೆಂಗಳೂರು, ಸೆ.6- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಮ್ಮ ಕುಟುಂಬದ ಸದಸ್ಯರೊಂದಿಗೆ ನೇಪಾಳ ಪ್ರವಾಸ ಕೈಗೊಂಡಿದ್ದು, ಕಠ್ಮಂಡುವಿನ ಪಶುಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇಂದು ಸಂಜೆ ಬೆಂಗಳೂರಿನಿಂದ ಕಠ್ಮಂಡುಗೆ ಪ್ರವಾಸ ಕೈಗೊಳ್ಳಲಿರುವ ದೇವೇಗೌಡರು, ನಾಳೆ ಬೆಳಗ್ಗೆ ಪಶುಪತಿ ದೇವಾಲಯದಲ್ಲಿ ಶಿವನ ದರ್ಶನ ಪಡೆಯಲಿದ್ದಾರೆ.

ಕುಟುಂಬ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ನಾಳೆ ಸಂಜೆ ದೆಹಲಿಗೆ ವಾಪಾಸ್ಸಾಗುವ ಕಾರ್ಯಕ್ರಮವಿದೆ. ಅವರ ಕುಟುಂಬ ಸದಸ್ಯರಾದ ಪತ್ನಿ ಚೆನ್ನಮ್ಮ, ಪುತ್ರಿ ಶೈಲಜಾ ಚಂದ್ರಶೇಖರ್, ಪುತ್ರ ಸಚಿವ ಎಚ್.ಡಿ.ರೇವಣ್ಣ, ಮೊಮ್ಮಗ ಡಾ.ಸೂರಜ್ ರೇವಣ್ಣ, ಡಾ.ಸೌಮ್ಯ ರಮೇಶ್, ಸುಕೀರ್ತ ರಮೇಶ್ ಕೂಡ ದೇವೇಗೌಡರೊಂದಿಗೆ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin