ದಸರಾ ಆನೆಗಳ ತೂಕ ಪರೀಕ್ಷೆ, 400 ಕೆಜಿ ತೂಕ ಹೆಚ್ಚಿಸಿಕೊಂಡ ಕ್ಯಾಪ್ಟನ್ ಅರ್ಜುನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಸೆ.6- ಜಗದ್ವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸಲಿರುವ ಆನೆಗಳ ತೂಕ ಪರೀಕ್ಷೆಯನ್ನು ಇಂದು ನಡೆಸಲಾಯಿತು. ಆನೆಗಳ ಆರೋಗ್ಯದ ಮೇಲೆ ನಿಗಾ ಇಡಲು ಹಾಗೂ ಅವುಗಳ ಆರೈಕೆಯನ್ನು ಹೇಗೆ ಮಾಡಬೇಕೆಂಬುದನ್ನು ತಿಳಿದು ಅದಕ್ಕೆ ಸೂಕ್ತ ಆಹಾರ ಪೂರೈಕೆ ಸೇರಿದಂತೆ ಇನ್ನಿತರ ವ್ಯವಸ್ಥೆ ಕಲ್ಪಿಸಲು ತೂಕ ಮಾಡಿಸಲಾಯಿತು.

ಈ ಬಾರಿಯ ಕ್ಯಾಪ್ಟನ್ ಅರ್ಜುನನೇ ಹೆಚ್ಚು ಬಲಶಾಲಿ ಹಾಗೂ ತೂಕದ ಆನೆಯಾಗಿದ್ದು, ಕಳೆದ ಬಾರಿ 5.250 ಕೆಜಿ ಇದ್ದ ಅರ್ಜುನ ಈ ಬಾರಿ 400 ಕೆಜಿಯಷ್ಟು ತನ್ನ ತೂಕವನ್ನು ಹೆಚ್ಚಿಸಿಕೊಂಡಿದ್ದಾನೆ. 3,120 ಕೆಜಿ ತೂಕ ಹೊಂದಿರುವ ವರಲಕ್ಷ್ಮಿ ಕಳೆದ ವರ್ಷಕ್ಕಿಂತ ಈ ಬಾರಿ 210 ಕೆಜಿಯಷ್ಟು ಹೆಚ್ಚಾಗಿದ್ದು, ಕಳೆದ ಬಾರಿ 2,830 ಕೆಜಿ ತೂಕವಿದ್ದಳು. ವಿಕ್ರಮ ಆನೆ 3985 ಕೆಜಿ , ಧನಂಜಯ 4045, ಗೋಪಿ 4435 ಹಾಗೂ ಚೈತ್ರ 2,920 ಕೆಜಿ ತೂಕ ಹೊಂದಿವೆ.

ಕಳೆದ ವರ್ಷ ಚೈತ್ರ, ವಿಕ್ರಮ, ಗೋಪಿ, 2ನೇ ತಂಡದಲ್ಲಿ ಆಗಮಿಸಿದ್ದವು. ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿರುವ ಧನಂಜಯ ಆನೆಯನ್ನು ತೂಕ ಮಾಡಲಾಗಿದೆ.   ಮೊದಲ ತಂಡದಲ್ಲಿ ಆಗಮಿಸಿರುವ 6 ಆನೆಗಳಿಗೆ ಇಂದಿನಿಂದಲೇ ತಾಲೀಮು ಆರಂಭಿಸಲಾಗಿದೆ. ವಿಜಯದಶಮಿಯಂದು 5 ಕಿ.ಮೀ ವರೆಗೂ ಆನೆಗಳು ಸಾಗಬೇಕಾಗಿದ್ದು, ಈ ಮಾರ್ಗ ಕ್ರಮಿಸಲು 5 ಗಂಟೆ ಸಮಯ ಬೇಕಾಗುತ್ತದೆ. ಹಾಗಾಗಿ ಆನೆಗಳ ದೈಹಿಕ ಸಾಮಥ್ರ್ಯ ತಿಳಿಯಲು ತೂಕ ಮಾಡಿಸಲಾಗುತ್ತದೆ.

Dasara-Elephant-Arjuna-02

ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಈ ಎಲ್ಲ ಆನೆಗಳಿಗೂ ಬೆಲ್ಲ, ತೆಂಗಿನಕಾಯಿ, ಭತ್ತ, ಮುದ್ದೆ, ಬೆಣ್ಣೆ ಸೇರಿದಂತೆ ಇನ್ನು ಕೆಲವು ಪೌಷ್ಠಿಕ ಆಹಾರ ನೀಡಲಾಗುವುದು. ಇದೇ ಸೆ.14ರಂದು 2ನೇ ತಂಡದ ಆನೆಗಳು ಅರಮನೆಗೆ ಆಗಮಿಸಲಿವೆ. ನಗರದ ಪರಿಸರಕ್ಕೆ ಹೊಂದಿಕೊಳ್ಳಲು ಇಂದಿನಿಂದ ಆನೆಗಳಿಗೆ ವಾಕಿಂಗ್ ಮಾಡಿಸಲಾಗುತ್ತಿದೆ. ಮುಂದಿನ ವಾರದಿಂದ ಆನೆಗಳಿಗೆ ಭಾರ ಹೊರುವ ಅಂಬಾರ ಹೊರಿಸಿ ತಾಲೀಮು ನಡೆಸಲಾಗುವುದು.

Facebook Comments

Sri Raghav

Admin