ಪಾಕ್ ಭಯೋತ್ಪಾದನೆ ನಿಲ್ಲಿಸಿದರೆ ನಾವು ನೀರಜ್ ಚೋಪ್ರಾ ರೀತಿ ವರ್ತಿಸುತ್ತೇವೆ : ರಾವತ್

ಈ ಸುದ್ದಿಯನ್ನು ಶೇರ್ ಮಾಡಿ

Bipin--01

ನವದೆಹಲಿ, ಸೆ.6 (ಪಿಟಿಐ)- ಭಯೋತ್ಪಾದನೆ ನಿಗ್ರಹಕ್ಕೆ ಪಾಕಿಸ್ತಾನ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಮಾಡಿರುವ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪಾಕ್ ಉಗ್ರವಾದವನ್ನು ನಿಲ್ಲಿಸಿದರೆ ನಾವು ನೀರಜ್ ಚೋಪ್ರಾ ರೀತಿ ವರ್ತಿಸುತ್ತೇವೆ ಎಂದು ಹೋಲಿಕೆ ಮಾಡಿದ್ದಾರೆ. ಇಂಡೋನೆಷ್ಯಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 18ನೇ ಏಷ್ಯಾ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಬಂಗಾರ ಗೆದ್ದ ನೀರಜ್ ಚೋಪ್ರಾ, ಪಾಕಿಸ್ತಾನದ ಕಂಚು ಪದಕ ವಿಜೇತ ಅರ್ಷದ್ ನದೀಮ್ ಜೊತೆ ಪೋಡಿಯಂನಲ್ಲಿ ಅತ್ಯಂತ ಆತ್ಮೀಯವಾಗಿ ಬೆರತ ಸಂಗತಿಯನ್ನು ರಾವತ್ ಉಲ್ಲೇಖಿಸಿದ್ದಾರೆ.

ಏಷ್ಯನ್ ಗೇಮ್ಸ್‍ನಲ್ಲಿ ಪದಕಗಳನ್ನು ಗೆದ್ದ ಯೋಧರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರೀಡಾಮನೋಭಾವದಂಥ ವಾತಾವರಣ ನೆಲೆಗೊಳ್ಳಬೇಕೆಂದು ನಾವು ಬಯಸುತ್ತೇವೆ. ಅವರು ಮೊದಲ ಹೆಜ್ಜೆ ಮುಂದಿಡಬೇಕು. ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಅದನ್ನು ನಿಲ್ಲಿಸಿದರೆ ನಾವು ಕೂಡ ನೀರಜ್ ಚೋಪ್ರಾ ರೀತಿ ಸದ್ಭಾವನಾ ನಿಲುವು ತೋರ್ಪಡಿಸುತ್ತೇವೆ ಎಂದರು.

Neeraj

ಭಾರತದ ಪ್ರತಿಭಾವಂತ ಭರ್ಜಿ ಎಸೆತ ಪಟು ಪಾಕ್‍ನ ತಮ್ಮ ಸಹವರ್ತಿಗೆ ಕೈಕುಲುಕಿ ಆತ್ಮೀಯವಾಗಿ ಬೆರತ ಕ್ಷಣದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿದ್ದವು.

Facebook Comments

Sri Raghav

Admin