ಚಂಡಮಾರುತದಿಂದ ನಲುಗಿದ್ದ ಜಪಾನ್‍ನಲ್ಲಿ ಭೂಕಂಪ, ಸಾವು-ನೋವು, ಹಲವರ ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

Japann--01

ಟೋಕಿಯೊ, ಸೆ. 6 (ಪಿಟಿಐ)- ವಿನಾಶಕಾರಿ ಚಂಡಮಾರುತದಿಂದ ನಲುಗುತ್ತಿರುವ ಉದಯರವಿ ನಾಡು ಜಪಾನ್ ಹಿಕ್ಕೈಡೋ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಹಾಗೂ ನಂತರದ ಭೂಕುಸಿತದಿಂದ ಮೂವರು ಮೃತಪಟ್ಟು, ಅನೇಕರು ನಾಯಗೊಂಡಿದ್ದಾರೆ.  ಈ ದುರ್ಘಟನೆಗಳಲ್ಲಿ ಅನೇಕರು ಕಣ್ಮರೆಯಾಗಿದ್ದರು. ಹಲವು ಮನೆಗಳು ಉರುಳಿ ಬಿದ್ದಿವೆ.

ತೂಪಾನ್ ಆರ್ಭಟದಿಂದ ತತ್ತರಿಸುತ್ತಿರುವ ಜಪಾನ್‍ನಲ್ಲಿಈ ಭೂಕಂಪ-ಭೂಕುಸಿತದಿಂದ ಗಾಯದ ಮೇಲೆ ಬರೆ ಎಳೆದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳಿಂದ ಇದೇ ಪ್ರಾಂತ್ಯದಲ್ಲಿ ವಿನಾಶಕಾರಿ ಚಂಡಮಾರುತದಿಂದ ಸಾವು-ನೋವು ಸಂಭವಿಸಿ ಅಪಾರ ಹಾನಿಯಾಗಿತ್ತು. ಅದರ ಬೆನ್ನಲ್ಲೇ ಈ ರಿಕ್ಟರ್ ಮಾಪಕದಲ್ಲಿ 6.6ರಷ್ಟು ತೀವ್ರತೆಯ ಭೂಕಂಪ ಹಾಗೂ ಅನೇಕ ಭೂಕುಸಿತಗಳು ಉಂಟಾಗಿವೆ. ಇದರಿಂದ ದ್ವೀಪವಾಸಿಗಳು ಮತ್ತಷ್ಟು ಭಯಭೀತರಾಗಿದ್ದಾರೆ.  ಅನೇಕರು ಗಾಯಗೊಂಡಿದ್ದು, ಹಲವು ಮಂದಿ ನಾಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

Facebook Comments

Sri Raghav

Admin