BREAKING : ತೆಲಂಗಾಣ ಸರ್ಕಾರ ವಿಜರ್ಸನೆ, ಹೊಸ ಜನಾದೇಶ ಪಡೆಯಲು ಮುಂದಾದ ಕೆಸಿಆರ್

ಈ ಸುದ್ದಿಯನ್ನು ಶೇರ್ ಮಾಡಿ

Telangana
ಹೈದರಾಬಾದ್,ಸೆ.6-ಅವಧಿಗೂ ಮುನ್ನವೇ ಹೊಸ ಜನಾದೇಶ ಪಡೆಯಲು ಮುಂದಾಗಿರುವ ತೆಲಾಂಗಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಇಂದು ವಿಧಾನಸಭೆ ವಿಸರ್ಜನೆ ನಿರ್ಧಾರ ಕೈಗೊಂಡರು. ತೆಲಂಗಾಣ ವಿಧಾನಸಭೆಯಲ್ಲಿ ಇಂದು ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಯಿತು.

ಕಳೆದ ಭಾನುವಾರವೇ ರಂಗಾರೆಡ್ಡಿ ಜಿಲ್ಲೆಯಲ್ಲಿ ಪಕ್ಷದ ವತಿಯಿಂದ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆ ವೇಳೆ ವಿಧಾನಸಭೆ ವಿಸರ್ಜನೆ ಮಾಡಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಚಂದ್ರಶೇಖರ್ ರಾವ್ ಕೇವಲ ಸರ್ಕಾರದ ಸಾಧನೆಗಳನ್ನು ಜನತೆಯ ಮುಂದಿಟ್ಟಿದ್ದರು. ಅಲ್ಲದೆ ಜನತೆಗಾಗಿ ಕೆಲವು ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು.

ತೆಲಂಗಾಣ ವಿಧಾನಸಭೆಯ ವೇಳಾಪಟ್ಟಿಯಂತೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮೇ ತಿಂಗಳಿನಲ್ಲಿ ನಡೆಯಬೇಕಿತ್ತು. ಈವರೆಗೂ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆಯುತ್ತಿತ್ತು. ಈಗ ಅವಧಿಗೂ ಮುನ್ನವೇ ಚುನಾವಣೆ ಎದುರಿಸಲು ವಿಧಾನಸಭೆಯನ್ನು ವಿಸರ್ಜನೆ ಮಾಡಲು ಇಂದು ನಿರ್ಧರಿಸಿದರು. ವಿಧಾನಸಭೆ ವಿಸರ್ಜನೆಯಾಗಿದ್ದು, ಡಿಸೆಂಬರ್ ತಿಂಗಳ ಅಂತ್ಯದಲ್ಲಿ ರಾಜಸ್ಥಾನ, ಛತ್ತೀಸ್‍ಗಢ ಹಾಗೂ ಮಧ್ಯಪ್ರದೇಶದ ಜೊತೆಗೆ ತೆಲಂಗಾಣಕ್ಕೆ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿಪಡಿಸುವ ಸಾಧ್ಯತೆ ಇದೆ.

# ಅಧಿಕಾರ ಮರಳಿ ಗಳಿಸುವ ಆತ್ಮವಿಶ್ವಾಸ
ಅಧಿಕಾರವನ್ನು ಮರಳಿ ಗಳಿಸುವ ಸಂಪೂರ್ಣ ವಿಶ್ವಾಸ ಕೆಸಿಆರ್ ಅವರಿಗಿದೆ. ಚುನಾವಣೆ ತಡವಾದರೆ ಜನಾಭಿಪ್ರಾಯ ಬದಲಾಗಬಹುದು. ಅಥವಾ ಸರ್ಕಾರ ಬೀಳಬಹುದಾದ ಅಥವಾ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಸೋಲಿಸಬಲ್ಲ ವಿವಾದಗಳು ಹುಟ್ಟಿಕೊಳ್ಳಬಹುದು. ಈಗಲೇ ವಿಧಾನಸಭೆ ವಿಸರ್ಜಿಸಿದರೆ ಜನರಿಗೆ ಉತ್ತಮ ಅಭಿಪ್ರಾಯವಿರುವುದರಿಂದ ಗೆಲ್ಲುವ ಸಾಧ್ಯತೆಗಳು ಹೆಚ್ಚು.

# ವಿಧಾನಸಭೆ ಸಂಖ್ಯಾಬಲ
ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಲ್ಲಿ 63 ನ್ನು ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಗಳಿಸಿದೆ. ಉಳಿದಂತೆ ಎರಡನೇ ಅತೀ ದೊಡ್ಡ ಪಕ್ಷವಾದ ಕಾಂಗ್ರೆಸ್ ಗಳಿಸಿದ್ದು ಕೇವಲ 21 ಕ್ಷೇತ್ರಗಳನ್ನು. ಟಿಡಿಪಿ- 15, ವೈಎಸ್ ಆರ್ ಕಾಂಗ್ರೆಸ್-3, ಬಿಜೆಪಿ 7, ಮತ್ತು ಅಸಾದುದ್ದಿನ್ ಓವೈಸಿ ಅವರ ಎಐಎಂಐಎಂ 5 ಸ್ಥಾನಗಳನ್ನು ಗಳಿಸಿದ್ದವು.

Facebook Comments

Sri Raghav

Admin