ವಿಶ್ವದ 5ನೇ ಬೃಹತ್ ಅಣ್ವಸ್ತ್ರ ಸಾಮರ್ಥ್ಯದ ರಾಷ್ಟ್ರ ಪಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

Pakistan--01
ವಾಷಿಂಗ್ಟನ್, ಸೆ.6 (ಪಿಟಿಐ)- ಪಾಕಿಸ್ತಾನವು ವಿಶ್ವದ ಐದನೆ ಬೃಹತ್ ಅಣ್ವಸ್ತ್ರ ಸಾಮರ್ಥ್ಯದ ದೇಶವಾಗಲಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಪಾಕಿಸ್ತಾನದ ಬಳಿ ಈಗ 140 ರಿಂದ 150 ಅಣ್ವಸ್ತ್ರ ಸಿಡಿತಲೆಗಳು (ನ್ಯೂಕ್ಲಿಯರ್ ವಾರ್‍ಹೆಡ್ಸ್) ಇವೆ. ಈ ಸನ್ನಿವೇಶ ಇದೇ ರೀತಿ ಮುಂದುವರಿದರೆ ಈ ಶಸ್ತ್ರಾಸ್ತ್ರಗಳು 2025ರ ವೇಳೆಗೆ 220 ರಿಂದ 250ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಪಾಕಿಸ್ತಾನಿ ನ್ಯೂಕ್ಲಿಯರ್ ಫೋರ್ಸ್-2018ರ ಲೇಖಕರಾದ ಹ್ಯಾನ್ಸ್ ಎಂ. ಕ್ರಿಸ್ಟೀನ್‍ಸೆನ್, ರಾಬರ್ಟ್ ಎಸ್. ನೊರೀಸ್ ಮತ್ತು ಜೂಲಿಯಾ ಡೈಮಂಡ್ ಹೇಳಿದ್ದಾರೆ.

ಪಾಕಿಸ್ತಾನದ ಅಣ್ವಸ್ತ್ರ ವಿದ್ಯಮಾನಗಳನ್ನು ಗಮನಿಸಿದರೆ ಅದು ವಿಶ್ವದ ಐದನೇ ಅತಿದೊಡ್ಡ ಅಣ್ವಸ್ತ್ರ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಲೇಖಕರು ಉಲ್ಲೇಖಿಸಿದ್ದಾರೆ.

ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆ 1999ರಲ್ಲಿ ನೀಡಿದ ವರದಿ 2020ರಲ್ಲಿ ಪಾಕಿಸ್ತಾನದ ಬಳಿ 60 ರಿಂದ 80 ಅಣ್ವಸ್ತ್ರಗಳು ಇರಲಿವೆ ಎಂದು ಹೇಳಿತ್ತು. ಆದರೆ 2018ರಲ್ಲೇ ಇಸ್ಲಾಮಾಬಾದ್ 140 ರಿಂದ 150 ನ್ಯೂಕ್ಲಿಯರ್ ವೇಪನ್‍ಗಳನ್ನು ಹೊಂದಿವೆ.

Facebook Comments

Sri Raghav

Admin