ಶೂಟಿಂಗ್’ನಲ್ಲಿ ವಿಶ್ವ ದಾಖಲೆಯೊಂದಿಗೆ ಸೌರಭ್‍ಗೆ ಚಿನ್ನದ ಪದಕ

ಈ ಸುದ್ದಿಯನ್ನು ಶೇರ್ ಮಾಡಿ

Sourabha--01

ಚಾಂಗ್‍ವೊನ್, ಸೆ.6-ದಕ್ಷಿಣ ಕೊರಿಯಾ ಚ್ಯಾಂಗ್‍ವೊನ್‍ನಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ವಿಶ್ವಚಾಂಪಿಯನ್‍ಶಿಪ್‍ನಲ್ಲಿ ಭಾರತೀಯ ಶೂಟರ್‍ಗಳ ಪದಕ ಬೇಟೆ ಮುಂದುವರೆದಿದೆ. 10 ಮೀಟರ್ ಏರ್ ರೈಫಲ್ ಕಿರಿಯರ ಸ್ಫರ್ಧೆಯಲ್ಲಿ ಏಷ್ಯನ್ ಗೇಮ್ಸ್ ನ ಬಂಗಾರದ ಪದಕ ವಿಜೇತ ಸೌರಭ ಚೌಧರಿ ಹೊಸ ವಿಶ್ವ ದಾಖಲೆ ಸಾಧನೆಯೊಂದಿಗೆ(ಫೈನಲ್‍ನಲ್ಲಿ 245.5 ಸ್ಕೋರ್) ಚಿನ್ನದ ಸಾಧನೆ ಮಾಡಿದ್ದಾರೆ. ಇದೇ ಸ್ಪರ್ಧೆಯಲ್ಲಿ ಅರ್ಜುನ್ ಸಿಂಗ್ ಚೀಮಾ ಕಂಚು ಗೆದ್ದು ಭಾರತದ ಹೆಮ್ಮೆಯನ್ನು ದ್ವಿಗುಣಗೊಳಿಸಿದ್ದಾರೆ.

ಪುರುಷರ ಜ್ಯೂನಿಯರ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಅಮನ್ ಅಲಿ ಎಲಾಹಿ, ವಿವಾನ್ ಕಪೂರ್ ಮತ್ತು ಮಾನವಾಧಿತಯ್ ಸಿಂಗ್ ರಾಥೋಡ್ ಅವರನ್ನು ಒಳಗೊಂಡ ತಂಡ ಬೆಳ್ಳಿ ಗೆದ್ದು ಸಂಭ್ರಮಿಸಿದೆ.

Facebook Comments

Sri Raghav

Admin