ಸಾಹಿತಿ ಗಿರೀಶ್‍ಕಾರ್ನಾಡ್ ವಿರುದ್ಧ ದೂರು

ಈ ಸುದ್ದಿಯನ್ನು ಶೇರ್ ಮಾಡಿ

Naxal--01

ಬೆಂಗಳೂರು, ಸೆ.7-ನಾನೂ ಕೂಡ ನಗರ ನಕ್ಸಲ್ ಎಂದು ನಾಮಫಲಕ ಹಾಕಿಕೊಂಡು ಮೆರವಣಿಗೆಯಲ್ಲಿ ಸಾಗಿದ ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ಹೈಕೋರ್ಟ್ ವಕೀಲ ಅಮೃತೇಶ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗೌರಿಲಂಕೇಶ್ ಹತ್ಯೆ ನಡೆದು ಒಂದು ವರ್ಷ ತುಂಬಿದ ಸಂದರ್ಭದಲ್ಲಿ ವಿವಾದಿತ ಬೋರ್ಡ್ ಧರಿಸಿದ್ದ ಸಾಹಿತಿ ಕಾರ್ನಾಡ್ ಅವರು ನಾನು ನಕ್ಸಲ್ ಎಂದು ಬಹಿರಂಗವಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ. ಅವರನ್ನು ಬಂಧಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

ಇದಲ್ಲದೆ ಮಹಾರಾಷ್ಟ್ರದ ಕಬೀರ್‍ಕಾಲಾಮಂಚ್ ಸಮಾವೇಶದಲ್ಲೂ ಕೂಡ ಭಾಗವಹಿಸಿದ್ದರು. ಕಬೀರ್‍ಕಾಲಾಮಂಚ್ ಸಿಪಿಐ ಮಾವೋವಾದಿ ಬೆಂಬಲಿತ ನಿಷೇಧಿತ ಸಂಘಟನೆಯಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಶ್ಯಕತೆ ಏನಿತ್ತು ? ಈ ಬಗ್ಗೆ ತನಿಖೆ ನಡೆಸಬೇಕೆಂದು ಅಮೃತೇಶ್ ಆಗ್ರಹಿಸಿದ್ದಾರೆ.

Facebook Comments

Sri Raghav

Admin