37 ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 7 ಆರೋಪಿಗಳ ಬಂಧನ, 13 ಲಕ್ಷ ರೂ. ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

Crime-Kengeri

ಬೆಂಗಳೂರು,ಸೆ.7-ಪಶ್ಚಿಮ ವಿಭಾಗದ ಪೊಲೀಸರು 37 ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಿ ಹದಿಮೂರು ಲಕ್ಷ ರೂ. ಬೆಳೆ ಬಾಳುವ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.  ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಸುಮಾರು 6 ಲಕ್ಷ ರೂ. ಬೆಲೆ ಬಾಳುವ 5 ದ್ವಿಚಕ್ರ ವಾಹನಗಳು, 2 ಮಾರುತಿ 800 ಕಾರುಗಳು ಮತ್ತು ಕಾರಿನ 8 ಚಕ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್‍ಗಳು, ಕಾರುಗಳು ಹಾಗೂ ಕಾರಿನ ಟೈರ್‍ಗಳನ್ನು ಕಳವು ಮಾಡುತ್ತಿದ್ದ ಬಗ್ಗೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದವು. ವಾಹನಗಳು ಹಾಗೂ ಆರೋಪಿಗಳ ಪತ್ತೆಗಾಗಿ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ರವಿ.ಡಿ ಚನ್ನಣ್ಣವರ್, ಕೆಂಗೇರಿ ಉಪವಿಭಾಗದ ಡಾ.ಎಸ್.ಪ್ರಕಾಶ್ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ರಾಮಪ್ಪ ಬಿ.ಗುತ್ತೇರ್ ಮತ್ತು ಸಿಬ್ಬಂದಿ ಒಳಗೊಂಡ ತಂಡವನ್ನು ರಚಿಸಲಾಗಿತ್ತು.  ಅದರಂತೆ ಈ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳಾದ ಸುನೀಲ್ ಕುಮಾರ್(26), ಹರಿಪ್ರಸಾದ್(20) ಮತ್ತು ರಾಜಶೇಖರ್(19) ಎಂಬುವರನ್ನು ಬಂಧಿಸಿ 6 ಲಕ್ಷ ಬೆಲೆ ಬಾಳುವ ಮಾಲನ್ನು ವಶಪಡಿಸಿಕೊಂಡಿದ್ದಾರೆ.

# ಕಾರಿನ ಗ್ಲಾಸ್ ಒಡೆದು ಕಳ್ಳತನ:

Car
ಮೈಸೂರಿನಿಂದ ಬೆಂಗಳೂರಿಗೆ ಬಂದು ಪಾರ್ಕಿಂಗ್ ಸ್ಥಳದಲ್ಲಿನ ಕಾರುಗಳ ಗ್ಲಾಸ್‍ಗಳನ್ನು ಒಡೆದು ಕಾರ್‍ಸ್ಟಿರಿಯೋಗಳನ್ನು ಕಳ್ಳತನ ಮಾಡತ್ತಿದ್ದ ನಾಲ್ವರು ಆರೋಪಿಗಳನ್ನು ಕೆಪಿಅಗ್ರಹಾರ ಠಾಣೆ ಪೊಲೀಸರು ಬಂಧಿಸಿ 7 ಲಕ್ಷ ರೂ. ಬೆಲೆ ಬಾಳುವ ಕಾರ್ ಸ್ಟಿರಿಯೋಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಪಿ ಅಗ್ರಹಾರ ಠಾಣೆ ಸಿಬ್ಬಂದಿಗಳಿಗೆ ದೊರೆತ ಮಾಹಿತಿ ಮೇರೆಗೆ ಜೆಸಿರಸ್ತೆಯಲ್ಲಿ ಕಾರಿನ ಸ್ಟಿರಿಯೋಗಳನ್ನು ಮಾರಾಟ ಮಾಡಲು ಬಂದಿದ್ದ ಆರೋಪಿಗಳಾದ ನಜೀರ್ ಪಾಷ, ರಿಯಾಜ್ ಪಾಷನನ್ನು ಸ್ಟಿರಿಯೋ, ಎಫ್‍ಎಂ ಸಿಸ್ಟಮ್ ಗಳ ಸಮೇತ ಕರೆತಂದು ಇನ್ನಿಬ್ಬರು ಆರೋಪಿಗಳಾದ ಆಫ್ರೋಜ್  ಪಾಷ ಮತ್ತು ಸುಜ್ಜಾದ್ ಅಹಮದ್‍ನನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆ ವೇಳೆ ಮತ್ತೊಬ್ಬ ಆರೋಪಿ ಸಲೀಂ ಪಾಷ ಎಂಬಾತ ತಲೆಮರೆಸಿಕೊಂಡಿದ್ದಾನೆ.   ಈ ಆರೋಪಿಗಳು ಮೈಸೂರಿನಿಂದ ರಾತ್ರಿ ವೇಳೆ ಮಾರುತಿ 800 ಕಾರಿನಲ್ಲಿ ಬೆಂಗಳೂರಿಗೆ ಬಂದು ನಗರದ ವಿವಿಧ ಪ್ರದೇಶಗಳಲ್ಲಿ ಕಾರಿನ ಗಾಜುಗಳನ್ನು ಒಡೆದು ಕಾರ್ ಸ್ಟಿರಿಯೋಗಳನ್ನು ಕಳ್ಳತನ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಆರೋಪಿಗಳು ನೀಡಿದ ಹೇಳಿಕೆ ಮೇರೆಗೆ 7 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ ಕಾರ್ ಸ್ಟಿರಿಯೋಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಾಜಿನಗರ ಪೊಲೀಸ್ ಠಾಣೆಯ 11 ಪ್ರಕರಣ, ವಿಜಯನಗರ 7, ಬಸವೇಶ್ವರನಗರ 2, ನಂದಿನಿ ಲೇಔಟ್ 4, ಅನ್ನಪೂರ್ಣೇಶ್ವರಿನಗರ 2, ಬ್ಯಾಟರಾಯನಪುರ, ಜ್ಞಾನಭಾರತಿ, ಮಾಗಡಿ ರಸ್ತೆ, ಕೆ.ಪಿ.ಅಗ್ರಹಾರ ಠಾಣೆಯ ತಲಾ ಒಂದೊಂದು ಪ್ರಕರಣ ಸೇರಿದಂತೆ ಒಟ್ಟು 30 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin