ಪಶ್ಚಿಮ ಬಂಗಾದಲ್ಲಿ ಮತ್ತೊಂದು ಸೇತುವೆ ಕುಸಿತ, ಕೆಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

West-Bengal

ಸಿಲಿಗುರಿ(ಪ.ಬಂ.)ಪಿಟಿಐ, ಸೆ.7-ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಮಂಗಳವಾರ ಸೇತುವೆಯೊಂದು ಕುಸಿದು ಮೂವರು ಮೃತಪಟ್ಟು, ಅನೇಕರು ಗಾಯಗೊಂಡ ದುರ್ಘಟನೆ ನೆನಪಿನಲ್ಲಿರುವಾಗಲೇ, ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿ ಸಮೀಪ ಇಂದು ಬೆಳಗ್ಗೆ ಅದೇ ರೀತಿಯ ಮತ್ತೊಂದು ಘಟನೆ ಸಂಭವಿಸಿದೆ. ಸೇತುವೆ ಕುಸಿತದಿಂದ ಕೆಲವರು ಗಾಯಗೊಂಡಿದ್ದಾರೆ.

ಉತ್ತರ ಬಂಗಾಳದ ಪ್ರಮುಖ ನಗರ ಸಿಲಿಗುರಿಯ ಮನ್‍ಗಂಜ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಒಂದು ಭಾಗ ಇಂದು ಬೆಳಗ್ಗೆ ಕುಸಿಯಿತು. ಇದೇ ಸಂದರ್ಭದಲ್ಲಿ ಸೇತುವೆ ಮೇಲೆ ಸಾಗುತ್ತಿದ್ದ ಟ್ರಕ್ ಚಾಲಕ ಸೇರಿದಂತೆ ಕೆಲವರು ಗಾಯಗೊಂಡರು ಎಂದು ಪಶ್ಚಿಮ ಬಂಗಾಳ ಸಚಿವ ರಬೀಂದ್ರನಾಥ್ ಘೋಷ್ ತಿಳಿಸಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕುಸಿತಗೊಂಡ ಸೇತುವೆಯ ಒಂದು ಭಾಗದಲ್ಲಿ ಸಿಲುಕಿದ್ದ ಟ್ರಕ್‍ನನ್ನು ನಂತರ ತೆರವುಗೊಳಿಸಲಾಗಿದೆ. ಈ ವಾರದಲ್ಲಿ ಇದು ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಎರಡನೇ ಸೇತುವೆ ಕುಸಿತ ಪ್ರಕರಣವಾಗಿದೆ. ಸೆಪ್ಟೆಂಬರ್ 4ರಂದು ಕೋಲ್ಕತಾದ ಅರ್ಟೆರಿಯಲ್ ರಸ್ತೆಯ ಮಜೇರ್‍ಹಾಟ್ ಮೇಲ್ಸೇತುವೆ ಒಂದು ಭಾಗ ಕುಸಿದು ಮೂವರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.

Facebook Comments

Sri Raghav

Admin