ಬ್ರಿಟಿಷ್ ಏರ್‍ವೇಸ್ ವೆಬ್‍ಸೈಟ್‍ಗೆ ಕನ್ನ, 3.80 ಲಕ್ಷ ಬ್ಯಾಂಕ್ ಕಾರ್ಡ್ ಮಾಹಿತಿ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

British-Airways

ಲಂಡನ್, ಸೆ.7(ಪಿಟಿಐ)- ವಿಶ್ವದ ಅತ್ಯಂತ ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಬ್ರಿಟಿಷ್ ಏರ್‍ವೇಸ್ ವೆಬ್‍ಸೈಟ್‍ಗೆ ದುಷ್ಕರ್ಮಿಗಳು ದೊಡ್ಡಮಟ್ಟದ ಹ್ಯಾಕ್(ಕನ್ನ)ಮಾಡಿದ್ದಾರೆ. ಅಲ್ಲಿನ 3.80 ಲಕ್ಷ ಬ್ಯಾಂಕ್ ಕಾರ್ಡ್‍ಗಳ ಮಾಹಿತಿಗಳನ್ನು ಹ್ಯಾಕರ್‍ಗಳು(ವೆಬ್‍ಸೈಟ್ ಕನ್ನಗಳ್ಳರು) ಕಳವು ಮಾಡಿದ್ದು, ತನಿಖೆ ತೀವ್ರಗೊಂಡಿದೆ.

ಆಗಸ್ಟ್ 21 ಮತ್ತು ಸೆಪ್ಟೆಂಬರ್ 5ರ ನಡುವೆ ವಿಮಾನ ಯಾನಕ್ಕಾಗಿ ಬುಕಿಂಗ್ ಮಾಡಲಾಗಿದ್ದ   ಗ್ರಾಹಕರುಗಳ ವೈಯಕ್ತಿಕ ಮತ್ತು ಆರ್ಥಿಕ ವಿವರಗಳನ್ನು ಕಳವು ಮಾಡಲಾಗಿದೆ. ಒಟ್ಟು 3,80,000 ಬ್ಯಾಂಕ್(ಪೇಮೆಂಟ್) ಕಾರ್ಡ್‍ಗಳ ಕಳ್ಳತನದ ಪ್ರಕರಣ ಇದಾಗಿದೆ ಎಂದು ಬ್ರಿಟಿಷ್ ಏರ್‍ವೇಸ್ ತಿಳಿಸಿದೆ.  ಬಹುತೇಕ ಎರಡು ವಾರಗಳ ಕಾಲ ನಡೆದ ಈ ಹ್ಯಾಕಿಂಗ್‍ನಲ್ಲಿ ಸಂಚಾರ ಅಥವಾ ಪಾಸ್‍ ಪೋರ್ಟ್ ವಿವರಗಳ ಕಳ್ಳತನ ನಡೆದಿಲ್ಲ. ಗ್ರಾಹಕರ ದತ್ತಾಂಶ ಮಾಹಿತಿ ಮತ್ತು ವಿವರಗಳನ್ನು ಕಳವು ಮಾಡಿರುವ ಘಟನೆ ಬಗ್ಗೆ ಪೊಲೀಸರು ಮತ್ತು ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದ್ದು, ತುರ್ತು ತನಿಖೆ ನಡೆದಯುತ್ತಿದೆ. ಎಂದು ಏರ್‍ಲೈನ್ಸ್ ಸಂಸ್ಥೆಯ ಉನ್ನತಾಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ನಮ್ಮ ಸಂಸ್ಥೆಯ ವೈಬ್‍ಸೈಟ್‍ಗೆ ಕನ್ನ ಹಾಕಿರುವುದು ಪತ್ತೆಯಾಗುತ್ತಿದ್ದಂತೆ ಕ್ಷಿಪ್ರ ಕ್ರಮಗಳನ್ನು ಕೈಗೊಂಡು ಬ್ಲಾಕ್ ಮಾಡಲಾಗಿದೆ. ಈಗ ವೆಬ್‍ಸೈಟ್ ರಕ್ಷಣಾತ್ಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin