ಬಿಜೆಪಿ ಶಾಸಕನ ನಾಲಿಗೆ ಕತ್ತರಿಸಿದರೆ 5 ಲಕ್ಷ ರೂ. ಬಹುಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

Congress--01

ನಾಗ್ಪುರ, ಸೆ.7-ಭಗ್ನಪ್ರೇಮದ ಯುವಕರಿಗಾಗಿ ಯುವತಿಯರನ್ನು ಅಪಹರಿಸುತ್ತೇನೆ ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಂ ನೀಡಿದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿರುವಾಗಲೇ, ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ನೀಡಿರುವ ಮತ್ತೊಂದು ಹೇಳಿಕೆ ಈಗ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಯುವತಿಯರ ಬಗ್ಗೆ ತುಚ್ಚವಾಗಿ ಮಾತನಾಡಿರುವ ಬಿಜೆಪಿ ಶಾಸಕ ರಾಮ್ ಕದಂ ಅವರ ನಾಲಿಗೆಯನ್ನು ಯಾರಾದರೂ ಕತ್ತರಿಸಿದರೆ ಅವರಿಗೆ 5 ಲಕ್ಷ ರೂ.ಗಳ ಇನಾಮು ನೀಡುವುದಾಗಿ ಕಾಂಗ್ರೆಸ್ ನಾಯಕ ಸುಭೋದ್ ಸಾವೋಜಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿವಾದ ಹೊಸ ಸ್ವರೂಪ ಪಡೆದಿದೆ.

ಪೂರ್ವ ಮಹಾರಾಷ್ಟ್ರದ ಬುಲ್ಧಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಸುಬೋಧ್ ಬಿಜೆಪಿ ಶಾಸಕರ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ್ದು, ಜನಪ್ರತಿನಿಧಿಯಾಗಲು ಅಂತಹವರು ಯೋಗ್ಯರಲ್ಲ. ಆದ ಕಾರಣ ಯಾರಾದರೂ ಅವರ ನಾಲಿಗೆಯನ್ನು ಕತ್ತರಿಸಿದರೆ 5 ಲಕ್ಷ ರೂ.ಗಳ ಬಹುಮಾನ ನೀಡುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲ ತಾಣಗಳಲ್ಲೂ ಹರಿದಾಡುತ್ತಿವೆ.  ಈಗಾಗಲೇ ಬಿಜೆಪಿ ಶಾಸಕರಿಗೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ ನೋಟೀಸ್ ಜಾರಿಗೊಳಿಸಿ ಪ್ರತ್ಯುತ್ತರ ಕೇಳಿದೆ. ಈಗ ಕಾಂಗ್ರೆಸ್ ನಾಯಕರು ನೀದಿರುವ ವಿವಾದಾತ್ಮಕ ಹೇಳಿಕೆ ಬಗ್ಗೆಯೂ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

Facebook Comments

Sri Raghav

Admin