ಅಮೆರಿಕದ ಬ್ಯಾಂಕ್‍ ಒಂದರಲ್ಲಿ ಗುಂಡಿನ ದಾಳಿ, ಭಾರತೀಯ ಸೇರಿ ಮೂವರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

FGiring--01

ನ್ಯೂಯಾರ್ಕ್, ಸೆ.7- ಬ್ಯಾಂಕ್ ಕಟ್ಟಡವೊಂದಕ್ಕೆ ನುಗ್ಗಿದ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ಯುವಕ ಸೇರಿದಂತೆ ಮೂವರು ಹತರಾಗಿ ಕೆಲವರು ಗಾಯಗೊಂಡಿರುವ ಘಟನೆ ಅಮೆರಿಕದ ಸಿನ್‍ಸಿನಾಟಿ ನಗರದಲ್ಲಿ ನಿನ್ನೆ ನಡೆದಿದೆ. ಈ ಘಟನೆ ನಂತರ ಪೆÇಲೀಸರು ಹಂತಕ ಗನ್‍ಮ್ಯಾನ್‍ನನ್ನು ಗುಂಡಿಟ್ಟು ಕೊಂದಿದ್ದಾರೆ.

ಓಹಿಓದ ನಾರ್ತ್ ಬೆಂಡ್ ಪಟ್ಟಣದ ಒಮರ್ ಎನ್ರಿಕ್ ಸಂತಾ ಪರೆಜ್(29) ಎಂಬ ಬಂದೂಕುಧಾರಿ ಸಿನ್‍ಸಿನಾಟಿ ನಗರಿಯ ಫೌಂಟೇನ್ ಸ್ಕ್ವೇರ್ ಬಳಿ ಇರುವ ಫಿಫ್ತ್ ಥರ್ಡ್ ಬ್ಯಾಂಕ್ ಕೇಂದ್ರ ಕಚೇರಿಗೆ ನುಗ್ಗಿ ಮನಸೋಇಚ್ಚೆ ಗುಂಡಿನ ದಾಳಿ ನಡೆಸಿದ. ಈ ದಾಳಿಯಲ್ಲಿ ಆಂಧ್ರಪ್ರದೇಶದ ಗುಂಟೂರಿನ ಪೃಥ್ವಿರಾಜ್ ಕಂಡೆಪಿ ಸೇರಿದಂತೆ ಮೂವರು ಹತರಾದರು ಎಂದು ಪೊಲೀಸ್ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಂತಕನ ದಾಳಿಯಲ್ಲಿ ಲೂಯಿಸ್ ಫೆಲಿಪೆ ಕಾಲ್ಡೆರಾನ್(48) ಮತ್ತು ರಿಚರ್ಡ್ ನ್ಯೂಕಮರ್(64) ಮೃತಪಟ್ಟಿದ್ದು, ಇತರ ಐವರು ಗಾಯಗೊಂಡಿದ್ದಾರೆ. ಬ್ಯಾಂಕ್ ಕಟ್ಟಡಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿ ಸಾವು-ನೋವಿಗೆ ಕಾರಣನಾದ ಓಮರ್ ಎನ್ರಿಕ್‍ನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

ಹಂತಕನ ದಾಳಿಗೆ ಬ್ಯಾಂಕ್ ಉದ್ಯೋಗಿ ಆಂಧ್ರದ ಪೃಥ್ವಿರಾಜ್ ಬಲಿಯಾದ ಘಟನೆ ಬಗ್ಗೆ ನ್ಯೂಯಾರ್ಕ್‍ನ ಭಾರತದ ರಾಜತಾಂತ್ರಿಕ ಕಚೇರಿ ರಾಯಭಾರಿ ಸಂದೀಪ್ ಚಕ್ರವರ್ತಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಉತ್ತರ ಅಮೆರಿಕ ತೆಲುಗು ಸಂಘ(ಟಿಎಎನ್‍ಎ) ಈ ಕೃತ್ಯವನ್ನು ಖಂಡಿಸಿದೆ.

Facebook Comments

Sri Raghav

Admin