ಮಂಗಳೂರಲ್ಲಿ ಸಿಎಂ ಪ್ರಗತಿ ಪರಿಶೀಲನಾ ಸಭೆಯ ಹೈಲೈಟ್ಸ್ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Mangaluru

ಮಂಗಳೂರು. ಸೆ. 07 : ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಮಂಗಳೂರಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು . ಪ್ರಗತಿ ಪರಿಶೀಲನಾ ಸಭೆಯ ಹೈಲೈಟ್ಸ್ ಈ ಕೆಳಕಂಡಂತಿದೆ.

> ಪ್ರಗತಿ ಪರಿಶೀಲನೆ ಸಭೆ ಮುಖ್ಯಾಂಶಗಳು :
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ 213 ಕೋಟಿ ರೂ.ಗಳಷ್ಟು ನಷ್ಟವನ್ನು ಅಂದಾಜಿಸಿದ್ದು ಸರ್ಕಾರಕ್ಕೆ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದಾರೆ.    ಸರ್ಕಾರ ಜನರ ಬವಣೆಗೆ ತುರ್ತು ಸ್ಪಂದಿಸಿ ಈಗಾಗಲೇ ಜಿಲ್ಲಾಡಳಿತಕ್ಕೆ 25 ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಿದ್ದು, ಜಿಲ್ಲಾಧಿಕಾರಿಗಳ ಬಳಿ ಇನ್ನೂ ನಾಲ್ಕು ಕೋಟಿ
ರೂ.ಗಳಿವೆ. ಜಿಲ್ಲೆಯಲ್ಲಿ ಒಟ್ಟು 759 ಕಿ.ಮೀ ರಸ್ತೆಗಳು, 152 ಸೇತುವೆಗಳು, 139 ಕೆರೆಗಳು, 1,237
ಸಾರ್ವಜನಿಕ ಕಟ್ಟಡಗಳು ಹಾನಿಗೊಂಡಿವೆ.

# ದುರಸ್ತಿ, ಪುನರ್ ನಿರ್ಮಾಣಕ್ಕೆ ಅಂದಾಜು ಪಟ್ಟಿಯನ್ನು ಸಲ್ಲಿಸಿದ್ದಾರೆ. ಆದರೆ ಸರ್ಕಾರದ ಆದೇಶಕ್ಕೆ ನಿರೀಕ್ಷಿಸದೆ ಅತೀ ತುರ್ತಾಗಿ ಗ್ರಾಮೀಣ ರಸ್ತೆ ಹಾಗೂ ಪ್ರಮುಖ ಹೆದ್ದಾರಿ ರಸ್ತೆಗಳನ್ನು ದುರಸ್ತಿ ಆರಂಭಿಸಲು ಸೂಚಿಸಲಾಗಿದೆ.

#  ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದಂತೆ ಶಾಸಕರು, ಲೋಕಸಭೆ ಸದಸ್ಯರ ಅಭಿಪ್ರಾಯವನ್ನು ಆಲಿಸಲಾಗಿದ್ದು, ಅಡಿಕೆ ಕೊಳೆರೋಗ ಹಾಗೂ ಕೃಷಿಗೆ ಸಂಬಂಧಿಸಿದಂತೆ ಸಮರ್ಪಕವಾಗಿ ಹಾಗೂ ಸಮಗ್ರವಾಗಿ ಪ್ರತ್ಯೇಕ ಸಮೀಕ್ಷೆಯನ್ನು ಸಮಗ್ರವಾಗಿ ನಡೆಸಿ ಕ್ರಮಕೈಗೊಳ್ಳಲಾಗುವುದು. ಇದೇ ರೀತಿ ಮನೆ ಹಾನಿ, ಮರಳು, ಕುಮ್ಕಿ ಭೂಮಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಲಾಗುವುದು.  ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ, ಕುಡಿಯುವ ನೀರಿನ ಬಗ್ಗೆಯೂ ಜಿಲ್ಲೆಗೆ ಅನುಕೂಲವಾಗುವಂತೆ ಎಲ್ಲ ಕ್ರಮಕೈಗೊಳ್ಳಲಾಗುವುದು.

# ಡೀಮ್ಡ್ ಫಾರೆಸ್ಟ್ – ವ್ಯಾಪ್ತಿ ಸ್ಪಷ್ಟವಾಗುವವರೆಗೆ ಕಂದಾಯ ಇಲಾಖೆಯವರು ಅರ್ಜಿಗಳನ್ನು ತಿರಸ್ಕರಿಸದೆ ಬಾಕಿ ಇಡಿ ಎಂಬ ಸೂಚನೆ ನೀಡಲಾಗಿದೆ. ಡೀಮ್ಡ್ ಫಾರೆಸ್ಟ್ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಈ ಸಂಬಂಧ ವರದಿ ಬರುವವರೆಗೆ ನಿರೀಕ್ಷಿಸಲು ನಿರ್ಧರಿಸಲಾಗಿದೆ.

# ಸರ್ವರ್ ಸಮಸ್ಯೆ ಈಗಿಲ್ಲ; ಭೂಮಿ ಸಂಬಂಧ ಸಮಸ್ಯೆ ಪರಿಹರಿಸಲು ಬಾಪೂಜಿ  ಕೇಂದ್ರಗಳಲ್ಲಿ ಲಭ್ಯವಾಗಿಸಲಾಗುವುದು. ಈ ಸಂಬಂದ ಎಲ್ಲ ಇಒಗಳನ್ನು ಕರೆಸಿ ಸಭೆ ನಡೆಸಿ  ಲೋಪದೋಷಗಳನ್ನು ಸರಿಪಡಿಸಿ. ಇನ್ನೊಂದು ವಾರದಲ್ಲಿ ಸಮಸ್ಯೆಗಳನ್ನು ಸರಿಪಡಿಸಲು ಭೂಮಿ  ಕೇಂದ್ರ ಬೆಂಗಳೂರಿಗೆ ಸೂಚನೆ ನೀಡಲಾಗುವುದು.

# ಸಮಾಜಕಲ್ಯಾಣ ಇಲಾಖೆ- ಜಾಗದ ಕೊರತೆ ಇಲ್ಲ ಹಾಸ್ಟೆಲ್ ಕಟ್ಟಡ ನಿರ್ಮಾಣ ಆರಂಭಿಸಲು
ಸೂಚನೆ. ಕೊಳವೆ ಬಾವಿ ಕೊರೆಯಲು ಪ್ರಾದೇಶಿಕ ವಲಯವನ್ನಾಗಿಸಿ ಅನುಷ್ಠಾನಕ್ಕೆ ತರಲು
ಚಿಂತನೆ.

Facebook Comments

Sri Raghav

Admin