ಸಲಿಂಗ ಕಾಮದಿಂದ ಎಚ್‍ಐವಿ ಹರಡುವಿಕೆ ಹೆಚ್ಚಾಗುತ್ತದೆ : ಸುಬ್ರಹ್ಮಣ್ಯಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Subramanian-Swamy
ನವದೆಹಲಿ ,ಸೆ.7- ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ 377ವಿಧಿಯನ್ನು ಸುಪ್ರೀಂಕೋರ್ಟ್ ರದ್ದು ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ನಾಯಕ ಸುಬ್ರಹ್ಮಣ್ಯಸ್ವಾಮಿ, ಇದರಿಂದ ಹೆಚ್‍ಐವಿ ಹರಡುವಿಕೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  ನಿನ್ನೆ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚಸದಸ್ಯರ ಪೀಠ 377 ವಿಧಿಯನ್ನು ರದ್ದುಪಡಿಸಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಸಲಿಂಗಕಾಮ ಎನ್ನುವುದು ಅನುವಂಶೀಯ ಅಸ್ವಸ್ಥತೆ. ಹೀಗಾಗಿ ಈ ವ್ಯಕ್ತಿತ್ವ ಹೊಂದಿರುವವರನ್ನು ಸಾಮಾನ್ಯ ಲೈಂಗಿಕ ವರ್ತನೆ ಹೊಂದಿರುವ ವ್ಯಕ್ತಿಗಳ ಜೊತೆ ಹೋಲಿಕೆ ಮಾಡಲು ಬರುವುದಿಲ್ಲ. ಈ ಕುರಿತು ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದರು. ಇದು ಅಮೆರಿಕಾದ ಸಂಸ್ಕೃತಿ. ಇನ್ನು ಮುಂದೆ ಶೀಘ್ರದಲ್ಲಿ ಸಲಿಂಗಿಗಳ ಬಾರ್ ಆರಂಭವಾಗಲಿದೆ. ಇದರಿಂದ ಹೆಚ್‍ಐವಿ ಹರಡುವಿಕೆ ಹೆಚ್ಚುತ್ತದೆ.  ಹಾಗಾಗಿ ಈ ವಿದ್ಯಮಾನಗಳನ್ನು ಗಮನಿಸುವ ಮುಂದಿನ ಸರ್ಕಾರ 7 ನ್ಯಾಯಮೂರ್ತಿಗಳ ಪೀಠಕ್ಕೆ ಈ ಆದೇಶ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.

Facebook Comments