ಮುಂಬೈನಲ್ಲಿ 532 ನಕ್ಷತ್ರ ಆಮೆ, 9040 ಕೆಜಿ ರಕ್ತಚಂದನ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

star-turtles

ಮುಂಬೈ, ಸೆ.7-ವಾಣಿಜ್ಯ ನಗರ ಮುಂಬೈನ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ನಡೆಸಿದ ಆದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‍ಐ) ಹಾಗೂ ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿ ಮತ್ತು ಅರಣ್ಯ ಇಲಾಖೆಯ ಜಂಟಿ ತಂಡ 532 ನಕ್ಷತ್ರ ಆಮೆಗಳು ಹಾಗೂ 9040 ಕೆಜಿ ರಕ್ತಚಂದನ ವಶಪಡಿಸಿಕೊಂಡಿದೆ.

ಲೋಕಮಾನ್ಯ ತಿಲಕ್ ಟರ್ಮಿನಸ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನನ್ನು ಬಂಧಿಸಿದ ಸಿಬ್ಬಂದಿ ಆತನ ಬಳಿ ಇದ್ದ 532 ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡಿದ್ದಾರೆ. ಇವು ಅತ್ಯಂತ ಅಪಾಯದ ಅಂಚಿನಲ್ಲಿರುವ ಪ್ರಾಣಿಗಳೆಂದು ಪರಿಗಣಿಸಲಾಗಿದೆ. ಜ ವಹರ್‍ಲಾಲ್ ನೆಹರು ಬಂದರು (ನಾವ ಶೇವಾ  ಪೋರ್ಟ್) ಪ್ರದೇಶದಲ್ಲಿ ಶೋಧ ನಡೆಸಿದ ಜಂಟಿ ತಂಡ 9040 ಕೆಜಿ ರಕ್ತಚಂದನ(ರೆಡ್ ಸ್ಯಾಂಡಲ್) ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ.

ಪಾಲಿಯೆಸ್ಟರ್ ನೂಲುಗಳು ಹಾಗೂ ಅಕ್ಕಿ ಚೀಲಗಳ ಮಧ್ಯೆ ರಕ್ತಚಂದನ ಮರದ ದಿಮ್ಮಿಗಳನ್ನು ಬಚ್ಚಿಡಲಾಗಿತ್ತು. ಇವುಗಳನ್ನು ಹೊರ ದೇಶಕ್ಕೆ ರಫ್ತು ಮಾಡಲು ಹವಣಿಸಲಾಗುತ್ತಿತ್ತು. ಸೆ.3ರಂದು ಡಿಆರ್‍ಐ ಅಧಿಕಾರಿಗಳು ಮುಂಬೈ ಮತ್ತು ಗುಜರಾತ್‍ನಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸುಮಾರು 8,000 ಕೆಜಿ ಶಾರ್ಕ್ ಮೀನುಗಳ ಈಜು ರೆಕ್ಕೆಗಳನ್ನು ವಶಪಡಿಸಿಕೊಂಡಿದ್ದರು. ಇವುಗಳನ್ನು ಚೀನಾ ಮತ್ತು ಹಾಂಕಾಂಗ್‍ಗೆ ಅಕ್ರಮವಾಗಿ ರಫ್ತು ಮಾಡಲು ಉದ್ದೇಶಿಸಲಾಗಿತ್ತು.

Facebook Comments

Sri Raghav

Admin