ಎಸ್‍ಟಿ/ಎಸ್‍ಸಿ ಕಾನೂನು ತಿದ್ದುಪಡಿ ಕುರಿತು ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

SUpreme--01

ನವದೆಹಲಿ, ಸೆ.7-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆಗೆ ಸಂಸತ್ತಿನಲ್ಲಿ ಹೊಸ ತಿದ್ದುಪಡಿಗಳನ್ನು ಮಾಡಿರುವ ಕ್ರಮವನ್ನು ಆಲ್ಟ್ರಾ ವೈರ್ಸ್ (ಅಧಿಕಾರಾತೀತ) ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ಪ್ರತ್ಯುತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಎ.ಕೆ.ಸುಕ್ರಿ ಮತ್ತು ಅಶೋಕ್ ಭೂಷಣವ ಅವರನ್ನು ಒಳಗೊಂಡ ಪೀಠವು ಆರು ವಾರಗಳ ಒಳಗೆ ಈ ಸಂಬಂಧ ಪ್ರತ್ಯುತ್ತರ ನೀಡುವಂತೆ ಸೂಚಿಸಿದೆ.

Facebook Comments

Sri Raghav

Admin