ಬಹುಕೋಟಿ ಡಾಲರ್ ಕಾಲ್ ಸೆಂಟರ್ ಹಗರಣದಲ್ಲಿ 7 ಭಾರತೀಯರೂ ಸೇರಿ 15 ಜನ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Call-Center

ಚಿಕಾಗೋ. ಸೆ.8-ಬಹುಕೋಟಿ ರೂ.ಗಳ ಕಾಲ್‍ಸೆಂಟರ್ ಹಗರಣದ ಸಂಬಂಧ ಏಳು ಭಾರತೀಯರೂ ಸೇರಿದಂತೆ 15 ಜನರನ್ನು ಬಂಧಿಸಲಾಗಿದ್ದು, ಭಾರತೀಯ ಮೂಲದ ಐದು ಹೊರ ಗುತ್ತಿಗೆ ಸಂಸ್ಥೆಗಳನ್ನು(ಬಿಸಿನೆಸ್ ಪ್ರೊಸೆಸ್ ಔಟ್‍ಸೋರ್ಸಿಂಗ್-ಬಿಪಿಒಗಳು) ಅಮೆರಿಕದ ನ್ಯಾಯಾಂಗ ಇಲಾಖೆ ದೋಷಿಗಳೆಂದು ಪರಿಗಣಿಸಿದೆ.

ಕಾಲ್ ಸೆಂಟರ್‍ಗಳ ಮೂಲಕ ಅಮೆರಿಕದ 2,000ಕ್ಕೂ ಹೆಚ್ಚು ನಾಗರಿಕರಿಗೆ ವಂಚಿಸಿದ ಈ ಪ್ರಕರಣದಿಂದಾಗಿ 5.5 ದಶಲಕ್ಷ ಡಾಲರ್‍ಗಳಷ್ಟು ಭಾರೀ ನಷ್ಟ ಉಂಟಾಗಿದೆ ಎಂದು ನ್ಯಾಯಾಂಗ ಇಲಾಖೆ ಆರೋಪಿಸಿದೆ.  ಆಂತರಿಕ ಆದಾಯ ಸೇವೆ(ಐಆರ್‍ಎಸ್) ಅಧಿಕಾರಿಗಳು ಅಥವಾ ದಿನದ ಆಧಾರದ ಮೇಲೆ ಸಾಲ ನೀಡುವ ವ್ಯಕ್ತಿಗಳ ಸೋಗಿನಲ್ಲಿ ಇವರು ಕಾಲ್‍ಸೆಂಟರ್‍ಗಳ ಆಪರೇಟರ್‍ಗಳು ಅಮೆರಿಕದ ಪ್ರಜೆಗಳನ್ನು ತಮ್ಮ ವಂಚನೆ ಬಲೆಯಲ್ಲಿ ಕೆಡವಿಕೊಳ್ಳುತ್ತಿದ್ದರು ಎಂದು ಅಟಾರ್ನಿ ಜನರಲ್ ಬಯುಂಗ್ ಜೆ. ಪಾಕ್ ಆರೋಪಿಸಿದ್ದಾರೆ.  ಇವರು ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಅಮಾಯಕರಿಗೆ ತೆರಿಗೆ ಪಾವತಿಸದಿದ್ದರೆ ದಂಡ, ಜುಲ್ಮಾನೆ, ಬಂಧನ ಹಾಗೂ ಜೈಲು ಶಿಕ್ಷೆಯ ಬೆದರಿಕೆ ಹಾಕುತ್ತಿದ್ದರು.

ಈ ಹಗರಣದ ಸಂಬಂಧ ಏಳು ಭಾರತೀಯರೂ ಸೇರಿದಂತೆ 15 ಜನರನ್ನು ಬಂಧಿಸಲಾಗಿದೆ. ಅಲ್ಲದೇ ಅಹಮದಾಬಾದ್ ಮೂಲಕ ಏಳು ಸಹಚರರು ಮತ್ತು ಐದು ಕಾಲ್ ಸೆಂಟರ್‍ಗಳನ್ನು ದೋಷಿಗಳೆಂದು ಪರಿಗಣಿಸಲಾಗಿದೆ. ಈ ವ್ಯವಸ್ಥಿತ ಹಗರಣದ ಹಿಂದೆ ದೊಡ್ಡ ಜಾಲವೇ ಇರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದ್ದು, ಕಾರ್ಯಾಚರಣೆ ಮುಂದುವರೆದಿದೆ.

Facebook Comments

Sri Raghav

Admin