ಮೂರು ಐಎಎಸ್ ಅಧಿಕಾರಿಗಳ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

IAS
ಬೆಂಗಳೂರು,ಸೆ.8-ಬಿಬಿಎಂಪಿ ವಿಶೇಷ ಆಯುಕ್ತ(ಚುನಾವಣೆಗಳು) ಮನೋಜ್‍ಕುಮಾರ್ ಮೀನಾ ಸೇರಿದಂತೆ ಮೂರು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರಾಗಿ(ಯೋಜನೆಗಳು) ಮನೋಜ್ ಕುಮಾರ್ ಮೀನಾ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಅಭಿಯಾನ ನಿರ್ದೇಶಕರಾಗಿ ಹಾಗೂ ಉದ್ಯಮಶೀಲತೆ ಮತ್ತು ಜೀವನೋಪಾಯ ಆಯುಕ್ತರಾಗಿ ಅಧಿಕ ಪ್ರಭಾರದಲ್ಲಿ ಜಿ.ಸತ್ಯವತಿ ಅವರನ್ನು ನೇಮಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರಾಗಿ (ಘನ ತ್ಯಾಜ್ಯ ನಿರ್ವಹಣೆ ) ಡಿ.ರಣದೀಪ್ ಅವರನ್ನು ನೇಮಿಸಿ ಆದೇಶಿಸಲಾಗಿದೆ.

Facebook Comments

Sri Raghav

Admin