ತುಪ್ಪದ ದೀಪ ಹಚ್ಚುವುದರ ಹಿಂದಿವೆ ಈ ರಹಸ್ಯಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Tuppa--01

ಬಹು ಪ್ರಾಚೀನಕಾಲದಿಂದಲೂ ನಮ್ಮಲ್ಲಿ ಆಚರಣೆಯಲ್ಲಿರುವ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸಂಪ್ರದಾಯಗಳನ್ನು ಇಂದಿನ ಪಾಶ್ಚಿಮಾತ್ಯವಿಜ್ಞಾನ, ಇವೆಲ್ಲದಕ್ಕೆ ಅರ್ಥವಿಲ್ಲದೆ ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಅನಾಗರಿಕತೆಯ ಲಕ್ಷಣ ಎಂದು ಹೀಯಾಳಿಸಿ ಅವುಗಳನ್ನು ತೊರೆಯಲು ಉಪದೇಶಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಮಂದಿ ಆಧುನಿಕ ವಿಚಾರವಾದಿಗಳು ಈ ಧಾರ್ಮಿಕ ಪರಂಪರೆಗಳ ಹಿಂದೆ ಇರುವ ಸತ್ಯಾಸತ್ಯತೆಗಳನ್ನು ತಿಳಿಯಲು ಚಿಂತನೆ ನಡೆಸಿ ಇವುಗಳು ಕೇವಲ ಅರ್ಥಹೀನ ಅನಾಗರಿಕ, ಮೂಢನಂಬಿಕೆಗಳಾಗಿರದೆ ನಮ್ಮ ನಾಗರಿಕ ಸಂಸ್ಕøತಿಯ ಸಂಕೇತವಾಗಿವೆ. ವ್ಯಕ್ತಿ ಮತ್ತು ಸಮಾಜದ ಆರೋಗ್ಯಕ್ಕೆ ಪೂರಕವಾಗಿವೆ ಎಂಬ ವೈಜ್ಞಾನಿಕ ಸತ್ಯವನ್ನು ಜನತೆಗೆ ತೋರಿಸಲು ಪ್ರಯತ್ನ ನಡೆಸಿದ್ದಾರೆ. ಭಾರತೀಯ ಸಂಸ್ಕøತಿಯ ಆಧಾರಸ್ತಂಭಗಳಂತಿರುವ ಈ ಧಾರ್ಮಿಕ ಪರಂಪರೆಗಳೂ ನಮ್ಮ ಧರ್ಮ ಮತ್ತು ಸಂಸ್ಕøತಿಯ ಉನ್ನತಿಗೆ ಕಾರಣವಾಗಿವೆ ಎನ್ನುವ ವಿಚಾರವನ್ನು ಜನತೆಗೆ ತಿಳಿಯಹೇಳಬೇಕಾದುದು ಇಂದಿನ ಆಧುನಿಕ ವಿಚಾರವಾದಿಗಳ ಚಿಂತಕರ ಆದ್ಯ ಕರ್ತವ್ಯವಾಗಿದೆ.

# ಸ್ವಾಸ್ಥ ರಕ್ಷಣೆಗೆ ಪೂರಕ :
ದೇವರಿಗೆ ತುಪ್ಪದ ದೀಪ ಹಚ್ಚುವ ಸಂಪ್ರದಾಯ ಸಂಪ್ರದಾಯ ನಮ್ಮಲ್ಲಿ ಬಹುಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ಒಂದು ಧಾರ್ಮಿಕ ಪರಂಪರೆ, ಇದೇ ರೀತಿ ದೇವಸ್ಥಾನಗಳಲ್ಲಿ ತುಪ್ಪದ ದೀಪ ಹಚ್ಚುವುದು, ತುಪ್ಪದ ಆರತಿ ಬೆಳಗುವುದು, ಹೋಮ-ಹವನಗಳಲ್ಲಿ ಅಗ್ನಿಗೆ ತುಪ್ಪ ಸುರಿಯುವುದು ಮುಂತಾದ ಧಾರ್ಮಿಕಸಂಪ್ರದಾಯಗಳು ನಮ್ಮಲ್ಲಿ ರೂಢಿಯಲ್ಲಿವೆ. ಇಂತಹ ಧಾರ್ಮಿಕ ಸಂಪ್ರದಾಯದ ಹಿನ್ನೆಲೆಯ ಸತ್ಯವನ್ನು ತಿಳಿಯಲು ಪ್ರಾಮಾಣಿಕ ಚಿಂತನೆ ನಡೆಸಿದಾಗ ಇದು ಕೇವಲ ಅರ್ಥಹೀನ ಆಚರಣೆ ಅಥವಾ ಮೂಢನಂಬಿಕೆಯಾಗಿರದೆ, ವ್ಯಕ್ತಿ ಮತ್ತು ಸಮಾಜದ ಸ್ವಾಸ್ಥ್ಯ ರಕ್ಷಣೆಗೆ ಪೂರಕವಾಗಿದೆ ಎಂಬ ವೈಜ್ಞಾನಿಕ ಸತ್ಯದ ಅರಿವಾಗುತ್ತದೆ.

GHee--01

ಆಯುರ್ವೇದ ವೈದ್ಯಶಾಸ್ತ್ರ ತುಪ್ಪ ಮತ್ತು ಅದರ ಔಷಧಿಯ ಗುಣಗಳನ್ನುವಿಫುಲವಾಗಿ ಚರ್ಚಿಸುತ್ತಾ ಆಯಸ್ಸು ಮತ್ತು ಆರೋಗ್ಯ ವರ್ಧನೆಗೆ ತುಪ್ಪ ಒಂದು ಶ್ರೇಷ್ಠ ಪೌಷ್ಟಿಕ ಪದಾರ್ಥ ಎಂದು ಸಾರುತ್ತದೆ. ಸೋಮಾರಿಗುಣವುಳ್ಳ ತುಪ್ಪವು, ಮಧುರ ರಸ, ಸ್ನಿಗ್ಧ ಗುಣ, ಶೀತವೀರ್ಯಗಳಿಂದ ಕೂಡಿದ್ದು ದೇಹದಲ್ಲಿ ಹೆಚ್ಚಾಗುವ ವಾತ ಮತ್ತು ಪಿತ್ತ ದೋಷಗಳನ್ನು ಕಡಿಮೆ ಮಾಡುವ ಸಾಮಥ್ರ್ಯ ಹೊಂದಿದೆ. ಅಗ್ನಿ ದೀಪಕ (ಜೀರ್ಣಶಕ್ತಿಯನ್ನು ಹೆಚ್ಚಿಸುವಿಕೆ) ಕಾಂತಿವರ್ಧಕ, ಶುಕ್ರರ್ಧಕ, ಓಜೋವರ್ಧಕ, ಯೌವ್ವನಕಾರಕ, ಆಯುರ್ವರ್ಧಕ, ಚಕ್ಷುಶ್ಯ (ಕಣ್ಣಿಗೆ ಹಿತಕಾರಕ) ವಿಷಘ್ನ ಮುಂತಾದ ಅಮೂಲ್ಯಗುಣಗಳ ಜೊತೆಎ ತುಪ್ಪ ಧೀ, ಧೃತಿ, ಸ್ಮತಿರ್ಧಕ, ಅಂದರೆ ವಿಷವನ್ನು ಗರಹಿಸುವ ಶಕ್ತಿಧಾರಣ ಶಕ್ತಿ, ಸ್ಮರಣ ಶಕ್ತಿ, ಪ್ರಸಾಧನ ಶಕ್ತಿ ಮುಂತಾದ ಬುದ್ಧಿಯ ಅಷ್ಟಾಂಗ ಗುಣಗಳನ್ನು ಹೆಚ್ಚಿಸುವ ಸಾಮಥ್ರ್ಯ ಹೊಂದಿದೆ. ತುಪ್ಪಕ್ಕೆ ಮನಸ್ಸಿನಲಿ ಮೂಡಬಹುದಾದ ದುಷ್ಟ ವಿಚಾರಗಳನ್ನು ನಿವಾರಿಸಿ, ಶಾಂತಚಿತ್ತ ಸ್ತಿತಿಯನ್ನುಂಟುಮಾಡುವ ಒಂದು ಅಪೂರ್ವ ಗುಣವಿದೆ. ಇಂತಹ ಅದ್ಭುತ ಗುಣವುಳ್ಳ ತುಪ್ಪದ ಸೇವನೆಯಿಂದ ಆಯಸ್ಸು ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಅರಿತಿದ್ದ ನಮ್ಮ ಪೂರ್ವಿಕರು ಇದನ್ನು ತಮ್ಮ ದೈನಂದಿನ ಆಹಾರದಲ್ಲಿ, ಆಚಾರದಲ್ಲಿ, ಹಾಗೂ ಔಷಧಿಯಾಗಿ ದಿನನಿತ್ಯ ಬಹು ವ್ಯಾಪಕವಾಗಿ ಬಳಸುತ್ತಿದ್ದರು.

ghe--02

# ವೈಜ್ಞಾನಿಕ ಹಿನ್ನೆಲೆ :
ಮನೆಯಲ್ಲಿ ಮಂಗಳ ಕಾರ್ಯ ನಡೆಯುವಾಗ, ಮದುವೆ-ಮುಂಜಿಗಳಲ್ಲಿ, ಹಾಗೂ ಜನಿಸಿದಾಗ, ಹಬ್ಬ ಹರಿದಿನ ಮುಂತಾದ ಇಶೇಷ ಸಂದರ್ಭಗಳಲ್ಲಿ ದೇವರಿಗೆ ತುಪ್ಪದ ದೀಪ ಹಚ್ಚಿ, ತುಪ್ಪದ ಆರತಿ, ಬೆಳಗುವ ಸಂಪ್ರದಾಯ ಬಹು ಹಿಂದಿನ ಕಾಲದಿಂದಲೂ ರೂಢಿಯಲ್ಲಿದೆ. ಪ್ರತಿದಿನ ದದೇವರಿಗೆ ತುಪ್ಪದ ದೀಪ ತುಪ್ಪದ ಆರತಿ, ಬೆಳಗುವ ಸಂಪ್ರದಾಯ ಬಹು ಹಿಂದಿನ ಕಾಲದಿಂದಲೂ ರೂಢಿಯಲ್ಲಿದೆ.

ಪ್ರತಿದಿನ ದದೇವರಿಗೆ ತುಪ್ಪದ ದೀಪ ಹಚ್ಚಿ ಪೂಜಿಸುವ ಪದ್ಧತಿಯನ್ನು ಈಗಲೂ ಸಹ ಕೆಲವರ ಮನೆಗಳಲ್ಲಿ ಕಾಣಬಹುದು. ಹೀಗೆ ಹಚ್ಚುವ ತುಪ್ಪದ ದೀಪ, ಬೆಳಗುವ ತುಪ್ಪದ ಆರತಿ ಆಂಧ್ರಶ್ರದ್ಧೆ, ಗೊಡ್ಡು ಸಂಪ್ರದಾಯ ಎಂದು ಅನೇಕರು ಭಾವಿಸಿವರು. ಆದರೆ ಇಲ್ಲಿ ದೇವರ ಮುಂದೆ ತುಪ್ಪದ ದೀಪ ಹಚ್ಚುವ ಪರಂಪರೆಯನ್ನು ವೈಜ್ಞಾನಿಕವಾಗಿ ವಿಚಾರ ಮಾಡಿದಾಗ ತುಪ್ಪದಲ್ಲಿರುವ ವಿಷಘ್ನ ಗುಣದಿಂದ ತುಪ್ಪದ ದೀಪ ಉರಿಯುವಾಗ ಹೊರಸೂಸುವ ಧೂಮ ಮನೆಯಲ್ಲಿನ ವಾತಾವರಣದಲ್ಲಿರುಬಹುದಾದ ವಿಷ. ಕ್ರಿಮಿಗಳನ್ನು ನಾಶ ಮಾಡಿ ಅದನ್ನು ಶ್ರದ್ಧ ಮಾಡುತ್ತದೆ. ಇದಲ್ಲದೆ ಈ ಧೂಮವನ್ನು ನಾಉ ಉಸಿರಾಟದ ಮೂಲಕ ಸೇವಿಸಿದಾಗ, ತುಪ್ಪದ ಮೇಧೋವರ್ಧಕ ಗುಣ ಪ್ರಭಾವದಿಂದ ಮಿದುಳಿನಲ್ಲಿ ಚೇತನ ಉಂಟಾಗಿ, ಮಿದುಳಿನ ಗ್ರಹಣ, ಧಾರಣ, ಸ್ಮರಣ ಪ್ರಸಾದನ ಶಕ್ತಿಗಳು ವೃದ್ಧಿಯಾಗುತ್ತವೆ. ಇದರಿಂದ ವ್ಯಕ್ತಿಯಲ್ಲಿ ವಿಷವನ್ನು ಗ್ರಹಿಸುವ ಶಕ್ತಿ, ಧಾರಣ ಮಾಡುವ ಶಕ್ತಿ, ಜ್ಞಾಪಕಶಕ್ತಿ ಪ್ರಸಾರಣ ಶಕ್ತಿಗಳು ಹೆಚ್ಚುತ್ತವೆ. ಇದಲ್ಲದೆ ತುಪ್ಪದ ಮತ್ತೊಂದು ಅಮೂಲ್ಯ ಗುಣವಾದ ಪಾಪನಾಶಕ ಶಕ್ತಿಯ ಪ್ರಭಾವದಿಂದ ಮನಸ್ಸಿನ ದೋಷಗಳಿಂದ ರಜೋಗುಣ ಮತ್ತು ತಮೋಗುಣಗಳು ನಾಶವಾಗಿ ಸಾತ್ವಿಕ ಗುಣ ವೃದ್ಧಿಯಾಗುತ್ತದೆ ಇದರಿಂದ ಮನಸ್ಸಿನಲ್ಲಿ ಮೂಡಬಹುದಾದ ಪಾಪ ವಿಚಾರಗಳು, ದುಷ್ಟ ವಿಚಾರಗಳು ದೂರವಾಗಿ ಶಾಂತಚಿತ್ತತೆ ಮೂಡುತ್ತದೆ.

# ಆರೋಗ್ಯದ ದೃಷ್ಟಿಯಿಂದ :
ಮನೆಯಲ್ಲಿ ದೇವರಿಗೆ ದಿನನಿತ್ಯ ತುಪ್ಪದ ದೀಪ ಬೆಳಗಿಸುವುದರಿಂದ ವಾತಾವರಣ ನಿರ್ಮಲವಾಗುವುದೇ ಅಲ್ಲದೆ ಮನಸ್ಸಿನಲ್ಲಿ ಮೂಡಬಹುದಾದಂತಹ ಪಾಪ ಚಿಂತನೆಗಳು ದೂರವಾಗಿ ಮನೆಯಲ್ಲಿ ವಾಸ ಮಾಡುವ ಮನಸ್ಸು ಶಾಂತಚಿತ್ತ ಸ್ಥಿತಿಯನ್ನು ದುರವಾಗಿ ಮನೆಯಲ್ಲಿ ವಾಸ ಮಾಡುವ ಮನಸ್ಸು ಶಾಂತಚಿತ್ತ ಸ್ಥಿತಿಯನ್ನು ಪಡೆದು ಸದಾ ಶಾಂತಿ, ನೆಮ್ಮದಿ ನೆಲೆಸುತ್ತವೆ. ದೇವರ ಮುಂದೆ ತುಪ್ಪದ ದೀಪ ಹಚ್ಚಿ ಪೂಜೆ ಧ್ಯಾನದಲ್ಲಿ ತೊಡಗಿದಾಗ ಮನಸ್ಸಿನ ಚಿಂಚಲತೆ ದೂರವಾಗಿ ಮನಸ್ಸು ಧ್ಯಾನದಲ್ಲಿ ಅಚಲವಾಗಿ ನಿಲ್ಲುತ್ತದೆ. ಇದರಿಂದ ಧ್ಯಾನದ ಪೂರ್ಣ ಫಲ ನಮಗೆ ದೊರೆಯುತ್ತದೆ. ಆದುದರಿಂದ ದೇವರ ಮುಂದೆ ತುಪ್ಪದ ದೀಪ ಹಚ್ಚುವ ಸಂಪ್ರದಾಯ. ಮೂಢನಂಬಿಕೆಯಾಗಿರದೆ ಮನಸ್ಸಿನ ಆರೋಗ್ಯವನ್ನು ಕಾಪಾಡುವ ಒಂದು ಶ್ರೇಷ್ಠ ವೈಜ್ಞಾನಿಕ ಸತ್ಯವನ್ನು ನಿರೂಪಿಸುತ್ತದೆ.

# ಪರಿಸರ ಸಂರಕ್ಷಣೆಗಾಗಿ :
ಇದಲ್ಲದೆ ಹೋಮ, ಹವನ, ಯಜ್ಞ-ಯಾಗಾದಿಗಳಲ್ಲಿ ಅಗ್ನಿಗೆ ತುಪ್ಪ ಸುರಿಯುವ ಪರಂಪರೆಯೂ ಸಹ ಬಹಳ ವೈಜ್ಞಾನಿಕ ಮಹತ್ವವುಳ್ಳದ್ದಾಗಿದೆ. ಹೋಮ ಯಜ್ಞಗಳಲ್ಲಿ ಬಳಸುವ ವಿಶೇಷ ವನಸ್ಪತಿಗಳು ಹಾಗೂ ತುಪ್ಪ ಇವುಗಳಿಂದ ಹೊರ ಸೂಸುವ ಧೂಮ ಸುತ್ತಮುತ್ತಲಿನ ವಾತಾವರಣವನ್ನು ನಿರ್ಮಲಗೊಳಿಸುತ್ತದೆ. ಹಾಗೂ ವ್ಯಕ್ತಿಯ ಮನಸ್ಸಿನ ಶಾಂತಚಿತ್ತತೆಯನ್ನು ಕಾಪಾಡಿ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡುವ ಸಾಮಥ್ರ್ಯವುಳ್ಳದ್ದಾಗಿದೆ ಎಂಬ ವಿಚಾರವನ್ನು ಇತ್ತೀಚಿನ ಕೆಲವು ವಿಚಾರವಾದಿ ವಿಜ್ಞಾನಿಗಳು ಪ್ರಮಾಣಿಕರಿಸಿದ್ದಾರೆ.

Facebook Comments

Sri Raghav

Admin