ಮಾಸ್ಕೋದಲ್ಲಿ ಅಂತಾರಾಷ್ಟ್ರೀಯ ಮಿಲಿಟರಿ ಬ್ಯಾಂಡ್‍ಗಳ ಅತ್ಯಾಕರ್ಷಕ ಉತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

dS
ಮಿಲಿಟರಿ ಬ್ಯಾಂಡ್ ಶಿಸ್ತು ಮತ್ತು ಸುಶ್ರಾವ್ಯ ಸಂಗೀತದ ಅಪರೂಪದ ಸಂಯೋಜನೆ. ರಷ್ಯಾದ ಸಂಸತ್ ಕ್ರೆಮ್ಲಿನ್ ಮುಂದೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ವಿವಿಧ ದೇಶಗಳ ಅಂತರರಾಷ್ಟ್ರೀಯ ಸೇನಾ ವಾದ್ಯಗೋಷ್ಠಿಗಳು ಮೊಳಗಿದವು.  ರಷ್ಯಾ ರಾಜಧಾನಿ ಮಾಸ್ಕೋದ ಹೃದಯ ಭಾಗದಲ್ಲಿರುವ ಸಂಸತ್ ಕ್ರೆಮ್ಲಿನ್ ಮುಂದೆ ರೆಡ್‍ಸ್ಕ್ವೆರ್‍ನಲ್ಲಿ ಏಳನೇ ಇಂಟರ್‍ನ್ಯಾಷನಲ್ ಮಿಲಿಟರಿ ಬ್ಯಾಂಡ್ ಫೆಸ್ಟಿವಲ್ ನಡೆಯಿತು.

ಈ ಅಂತರರಾಷ್ಟ್ರೀಯ ಉತ್ಸವದಲ್ಲಿ ಯುರೋಪ್ ಮತ್ತು ಏಷ್ಯಾ ಸೇರಿದಂತೆ ವಿಶ್ವದ ವಿವಿಧ ದೇಶಗಳ 15 ಸೇನಾ ಬ್ಯಾಂಡ್‍ಗಳ ಒಂದು ಸಾವಿರ ಸಂಗೀತಗಾರರು ಪಾಲ್ಗೊಂಡರು. ಜನಪ್ರಿಯ ಮಾರ್ಡನ್ ಮೆಲೋಡಿಗೆ ಶಾಸ್ತ್ರೀಯ ಸಂಗೀತ ಸ್ಪರ್ಶದೊಂದಿಗೆ ಆಕರ್ಷಕ ಪಥಸಂಚಲನ ನಡೆಯಿತು. ಈ ವರ್ಣರಂಜಿತ ಮ್ಯೂಸಿಕ್ ಮತ್ತು ಪೇರೆಡ್‍ನನ್ನು 75 ಸಾವಿರಕ್ಕೂ ಹೆಚ್ಚು ಮಂದಿ ಕಣ್ತುಂಬಿಕೊಂಡರು.  ಸೇಂಟ್ ಬೆಸಿಲ್ಸ್ ಕ್ಯಾಥೆಡ್ರಾಲ್‍ನ ಗೋಡೆಗಳ ಮೇಲೆ ಪ್ರತಿಬಿಂಬಿಸಲಾದ ಆತ್ಯಾಕರ್ಷಕ ಬೆಳಕಿನ ಪ್ರದರ್ಶನ ಮತ್ತು ಸಿಡಿಮದ್ದು-ಬಾಣಬಿರುಸುಗಳ ವೈಭವದೊಂದಿಗೆ ಉತ್ಸವ ಸಮಾರೋಪಗೊಂಡಿತು.

dS-1

dS-2

Facebook Comments