ಜಪಾನ್‍ನಲ್ಲಿ ವಿನಾಶಕಾರಿ ಭೂಕಂಪಕ್ಕೆ 30 ಕ್ಕೂ ಹೆಚ್ಚು ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Japan--01

ಟೋಕಿಯೊ, ಸೆ.8-ಉದಯರವಿ ನಾಡು ಜಪಾನ್‍ನಲ್ಲಿ ಪ್ರಬಲ ಭೂಕಂಪ ಹಾಗೂ ಆನಂತರದ ಭೂಕುಸಿತಗಳಿಂದ ಮೃತಪಟ್ಟವರ ಸಂಖ್ಯೆ 30ಕ್ಕೇರಿದೆ. ಈ ವಿನಾಶಕಾರಿ ಪ್ರಕೃತಿ ವಿಕೋಪದಲ್ಲಿ ಅನೇಕರು ಗಾಯಗೊಂಡಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಶೋಧ ಮುಂದುವರಿದಿದೆ. ಕಳೆದ ವಾರವಷ್ಟೇ ಭೀಕರ ಚಂಡಮಾರುತದಿಂದ ನಲುಗಿದ್ದ ಜಪಾನ್‍ನ ಉತ್ತರ ಹಕೈಡೋ ದ್ವೀಪ ಪ್ರದೇಶದಲ್ಲಿ ಮೊನ್ನೆ ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿತು. ಅದರ ಹಿಂದೆಯೇ ಸರಣಿ ಭೂಕುಸಿತಗಳು ಉಂಟಾದವು.

ಅಟ್ಸುಮಾ ಗ್ರಾಮಾಂತರ ಪ್ರದೇಶದಲ್ಲಿ ಅಧಿಕ ಸಾವು ನೋವು ಸಂಭವಿಸಿದೆ. ಇಲ್ಲಿ 400ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಒಂಭತ್ತು ಮಂದಿ ಕಣ್ಮರೆಯಾಗಿದ್ದಾರೆ. ಭೂಕುಸಿತದಿಂದಾಗಿ ಮಣ್ಣಿನ ರಾಶಿಯಡಿ ಸಿಲುಕಿರುವ ಜನರ ರಕ್ಷಣೆಗಾಗಿ ಸಮರೋಪಾದಿಯ ಶೋಧ ಕಾರ್ಯಾಚರಣೆ ಮುಂದುವರಿದಿದೆ.

Facebook Comments

Sri Raghav

Admin