ಮೈಸೂರು ರಾಜಮನೆತನದವರಿಗೆ ನೀಡುವ ಗೌರವ ಧನಕ್ಕೆ ಪ್ರೊ.ನಂಜರಾಜ ಅರಸು ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

NanajRaju

ಮೈಸೂರು, ಸೆ.8- ದಸರಾ ಮಹೋತ್ಸವ ಸಂದರ್ಭದಲ್ಲಿ ಮೈಸೂರು ರಾಜಮನೆತನದವರಿಗೆ ನೀಡುವ ಗೌರವ ಧನಕ್ಕೆ ಪ್ರೊ.ನಂಜರಾಜ ಅರಸು ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮದಡಿ ಗೌರವ ಧನದ ಬಗ್ಗೆ ಮಾಹಿತಿ ಪಡೆದಿರುವ ಅವರು, ಕಳೆದ ಐದು ವರ್ಷದಿಂದ ರಾಜಮನೆತನದವರಿಗೆ 1.36 ಕೋಟಿ ರೂ. ನೀಡಲಾಗಿರುವ ಮಾಹಿತಿ ಪಡೆದು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಂಜರಾಜ ಅರಸು ಅವರು ಪ್ರಶ್ನಿಸಿ, ದಸರಾ ಸಂದರ್ಭದಲ್ಲಿ ಸಂಪ್ರದಾಯದಂತೆ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಯಾವ ಸಂಪ್ರದಾಯದ ಬಗ್ಗೆ ಎಂಬುದು ಮಾಹಿತಿಯಲ್ಲಿ ನಮೂದಿಸಿಲ್ಲ. ಏತಕ್ಕಾಗಿ ಗೌರವಧನ ನೀಡಬೇಕು ಎಂದು ಅವರು ಪ್ರಶ್ನಿಸಿದರು. ನಾವೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆಯೋ ಅಥವಾ ರಾಜವಂಶಸ್ಥರ ಅಧಿಪತ್ಯದಲ್ಲಿದ್ದೇವೋ ಎಂದು ಪ್ರಶ್ನಿಸಿದ್ದಾರೆ. ಈ ಕೂಡಲೇ ರಾಜಮನೆತನದವರಿಗೆ ನೀಡುವ ಹಣವನ್ನು ನಿಲ್ಲಿಸಿ ಕೊಡಗಿನ ನೆರೆ ಪೀಡಿತರಿಗೆ ಕೊಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Facebook Comments

Sri Raghav

Admin