ಚಾಕು ತೋರಿಸಿ ಪಾರ್ಕ್‍ನಲ್ಲೇ ವಿವಾಹಿತೆ ಮೇಲೆ ಅತ್ಯಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

Rape--01

ಮುಜಾಫರ್‍ನಗರ್, ಸೆ.8-ಉದ್ಯಾನವನವೊಂದರಲ್ಲಿ ವಿವಾಹಿತ ಮಹಿಳೆಯೊಬ್ಬಳಿಗೆ ಚಾಕು ತೋರಿಸಿ ಪ್ರಾಣ ಬೆದರಿಕೆ ಹಾಕಿದ ದುಷ್ಕರ್ಮಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದ ಮುಜಾಫರ್‍ನಗರ್ ಜಿಲ್ಲೆಯ ಕುಲ್ಹೇದಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಉದ್ಯಾನವನವೊಂದರ ಮಾಲಿ ಪೊಲೀಸರಿಗೆ ದೂರು ನೀಡಿದ್ದು, ಖಲೀಲ್ ಅಹಮದ್ ಎಂಬಾತ ತನ್ನ ಪತ್ನಿಗೆ ದಾಕು ತೋರಿಸಿ ಬೆದರಿಸಿ ಈ ಕೃತ್ಯ ನಡೆಸಿರುವುದಾಗಿ ತಿಳಿಸಿದ್ಧಾರೆ. ಉದ್ಯಾನವನದಲ್ಲಿ ಪತಿ ಮತ್ತು ಪತ್ನಿ ನೆಲೆಸಿದ್ದರು. ಈ ಕೃತ್ಯ ನಡೆದಾಗ ಗಂಡ ಅಲ್ಲಿರಲಿಲ್ಲ ಎಂದು ಠಾಣಾಧಿಕಾರಿ ವಿ.ಸಿ.ತಿವಾರಿ ತಿಳಿಸಿದ್ಧಾರೆ. ಆರೋಪಿ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಮುಂದುವರಿಸಿದ್ದಾರೆ.

Facebook Comments

Sri Raghav

Admin