ಮಹಿಳೆಯ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಸರ ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

Pepper-Spray

ಬೆಂಗಳೂರು, ಸೆ.9- ಮನೆಯಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಕಸದ ತೊಟ್ಟಿಗೆ ಹಾಕಲು ಹೋಗುತ್ತಿದ್ದ ಮಹಿಳೆಯೊಬ್ಬರ ಮುಖಕ್ಕೆ ಪೆಪ್ಪರ್ ಸ್ಟ್ರೇ ಮಾಡಿದ ದರೋಡೆಕೋರನೊಬ್ಬ ಅವರ ಕತ್ತಿನಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರ ಕಿತ್ತು ಪರಾರಿಯಾಗಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.  ನಗರದ ಹೊರವಲಯದ ಬ್ಯಾಡರಹಳ್ಳಿಯ ಮಾದೇಶನಗರ 5ನೆ ಕ್ರಾಸ್ ನಿವಾಸಿ ನಿರ್ಮಲಾ ಅವರು ಸರ ಕಳೆದುಕೊಂಡವರು. ಅವರು ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಮನೆಯ ಕಸವನ್ನು ಎಸೆಯಲು ಸಮೀಪದಲ್ಲೆ ಇದ್ದ ಕಸದ ತೊಟ್ಟಿಯ ಕಡೆಗೆ ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ದರೋಡೆಕೋರನೊಬ್ಬ ಅವರ ಮುಖಕ್ಕೆ ಪೆಪ್ಪರ್ ಸ್ಟ್ರೇ ಮಾಡಿ ಅವರ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾನೆ. ತಕ್ಷಣ ನಿರ್ಮಲಾ ಅವರು ಕೂಗಿಕೊಂಡಿದ್ದು, ಸ್ಥಳೀಯರು ಆತನಿಗಾಗಿ ಹುಡುಕಾಡಿದರೂ ಆತ ಅಷ್ಟೊತ್ತಿಗೆ ನಾಪತ್ತೆಯಾಗಿದ್ದಾನೆ.  ಈ ಬಗ್ಗೆ ನಿರ್ಮಲಾ ಅವರು ನೀಡಿದ ದೂರಿನಂತೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Facebook Comments

Sri Raghav

Admin