ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ : ಪ್ರತ್ಯೇಕತಾವಾದಿ ಸೇರಿ ಮೂವರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Kashmir--01

ಶ್ರೀನಗರ, ಸೆ.9 (ಪಿಟಿಐ)- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ದಮನ ಕಾರ್ಯಾಚರಣೆಯನ್ನು ಭದ್ರತಾಪಡೆಗಳು ತೀವ್ರಗೊಳಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕತಾವಾದಿ ಸೇರಿದಂತೆ ಮೂವರು ಭಯೋತ್ಪಾದಕರನ್ನು ಯೋಧರು ಹೊಡೆದುರುಳಿಸಿದ್ದಾರೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲಿ ಭದತಾ ಪಡೆಗಳು ನಡೆಸುತ್ತಿದ್ದ ಕಾರ್ಯಾಚರಣೆ ವೇಳೆ ಗುಂಡು ತಗುಲಿ ತೆಹ್ರೀಕ್-ಇ-ಹುರಿಯತ್ ಸಂಘಟನೆ ಪ್ರತ್ಯೇಕತಾವಾದಿ ಹಕೀಂ-ಉಲ್-ರೆಹಮಾನ್ ಸುಲ್ತಾನಿ ಮೃತಪಟ್ಟಿದ್ಧಾನೆ.

ಅನಂತನಾಗ್ ಜಿಲ್ಲೆಯಲ್ಲಿ ಯೋಧರು ನಡೆಸಿದ ಎನ್‍ಕೌಂಟರ್‍ನಲ್ಲಿ ಲಷ್ಕರ್-ಇ-ತೈಬಾ(ಎಲ್‍ಇಟಿ) ಉಗ್ರಗಾಮಿ ಸಂಘಟನೆಯ ಸದಸ್ಯ ಅನ್ಸಾರಿ ಜುಜ್ವಾತ್-ಉಲ್ ಹಿಂದ್ ಹತನಾಗಿದ್ದಾನೆ. ಏತನ್ಮಧ್ಯೆ ಉತ್ತರ ಕಾಶ್ಮೀರದ ರಾಣಿಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ವೇಳೆ ಎಲ್‍ಇಟಿಯ ಮತ್ತೊಬ್ಬ ಉಗ್ರ ಬಲಿಯಾಗಿದ್ದಾನೆ.

ಮತ್ತೊಂದೆಡೆ ಶಂಕಿತ ಉಗ್ರರು ಶ್ರೀನಗರದ ಹಜ್ರತ್ವಾಲ್ ಪ್ರದೇಶದಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಆಸೀಫ್ ನಾಜೀರ್‍ದಾರ್ ಎಂಬಾತ ಮೃತಪಟ್ಟಿದ್ದಾನೆ. ಈತ ಕುಖ್ಯಾತ ಭಯೋತ್ಪಾದಕ ಜಾಕೀರ್ ಮೂಸಾ ರಚಿಸಿರುವ ಅಲ್ ಖೈದಾ ಕಾಶ್ಮೀರ ಉಗ್ರಗಾಮಿ ಸಂಘಟನೆಗೆ ಸೇರಿದ ಅನ್ಸಾರಿ ಎಂಬಾತನ ಸಂಬಂಧಿಕ ಎಂದು ಪೊಲೀಸರು ತಿಳಿಸಿದ್ದಾರೆ.  ಪುಲ್ವಾಮ ಜಿಲ್ಲೆಯ ಜಾಮೀಯಾ ಮಸೀದಿ ಬಳಿ ವಾಹನವೊಂದರ ಮೇಲೆ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಸಿಮ್ರಾನ್ ಜಾನ್ ಎಂಬ ಮಹಿಳೆ ಗಾಯಗೊಂಡಿದ್ದಾರೆ.

Facebook Comments

Sri Raghav

Admin