ಕೆಲಸಕ್ಕಾಗಿ ಮಂಚಕ್ಕೆ ಕರೆದರೆ 7 ವರ್ಷ ಜೈಲು ಗ್ಯಾರಂಟಿ..!

ಈ ಸುದ್ದಿಯನ್ನು ಶೇರ್ ಮಾಡಿ

Sex-Job

ನವದೆಹಲಿ, ಸೆ.9 (ಪಿಟಿಐ)- ಕೆಲಸಕ್ಕಾಗಿ ಮಂಚಕ್ಕೆ ಕರೆದರೆ(ಲೈಂಗಿಕ ಸಹಕಾರ ಅಥವಾ ಸೆಕ್ಷುಯಲ್ ಫೇವರ್) ಅಂಥ ಮಂದಿ ಇನ್ನು ಮುಂದೆ ಏಳು ವರ್ಷ ಜೈಲಿನಲ್ಲಿ ಕಂಬಿ ಎಣಿಸಬೇಕಾಗುತ್ತದೆ..! ಅದನ್ನೂ ಕೂಡ ಲಂಚ ಮಾದರಿಯ ಅಪರಾಧ ಎಂದು ಪರಿಗಣಿಸಬಹುದಾಗಿದ್ದು, ಆರೋಪಿಗಳಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಕೇಂದ್ರ ಕಾನೂನು ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಲೈಂಗಿಕ ಸಹಕಾರ ಕೋರುವಿಕೆ ಅಥವಾ ಅದನ್ನು ಅನುಭವಿಸುವಿಕೆ, ಪ್ರತಿಷ್ಠಿತ ಕ್ಲಬ್‍ಗಳಲ್ಲಿ ದುಬಾರಿ ಸದಸ್ಯತ್ವ ಅಥವಾ ಶೂಶ್ರಷೆ ಪಡೆಯುವಿಕೆ ಇವುಗಳನ್ನು ಸಹ ಲಂಚ ಮತ್ತು ಭ್ರಷ್ಟಾಚಾರ ಎಂದು ಪರಿಗಣಿಸಬಹುದಾಗಿದ್ದು, ಕಾನೂನಿನಡಿ ಏಳು ವರ್ಷ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ(ತಿದ್ದುಪಡಿ) ಕಾಯ್ದೆ, 2018ರ ಹೊಸ ಕಾಯ್ದೆಯಲ್ಲಿ ಈ ಮೂರು ಅಂಶಗಳನ್ನು ಲಂಚಗಳ ಸ್ವರೂಪವೆಂದು ಪರಿಗಣಿಸುವ ಕಾನೂನು ಸೇರಿಸಲಾಗಿದೆ. ಇದನ್ನು ಅನುಚಿತ ಪ್ರಯೋಜನ ಪಡೆಯುವಿಕೆ ಎಂಬ ಉಪ ಶೀರ್ಷಿಕೆ ಅಡಿ ಹೊಸ ನಿಯಮಗಳನ್ನು ಉಲ್ಲೇಖಿಸಲಾಗಿದೆ.

Office--2

ಯಾವುದೇ ಕಾನೂನುಬದ್ಧ ಕೆಲಸ ಮಾಡಿಕೊಟ್ಟಿದ್ದಕ್ಕೆ ನ್ಯಾಯಸಮ್ಮತ ಸಂಭಾವನೆ ಅಥವಾ ಶುಲ್ಕ ಪಡೆದ ನಂತರವೂ ಮಹಿಳೆಯರನ್ನು ಪಲ್ಲಂಗಕ್ಕೆ ಕರೆಯುವ ಲೈಂಗಿಕ ಸಹಕಾರ ಕೋರಿ ಪಡೆಯುವುದು ಹಾಗೂ ಅದನ್ನು ಸ್ವೀಕರಿಸುವುದು ಅಪರಾಧ. ಅದೇ ರೀತಿ ಪ್ರತಿಷ್ಠಿತ ಕ್ಲಬ್‍ಗಳಲ್ಲಿ ದುಬಾರಿ ಸದಸ್ಯತ್ವ ಹಾಗೂ ಐಷಾರಾಮಿ ಉಪಚಾರ ಪಡೆಯುವುದೂ ಸಹ ಲಂಚದ ಸ್ವರೂಪಗಳೇ ಆಗಿರುತ್ತವೆ ಎಂದು ಹೊಸ ಕಾನೂನಿನಲ್ಲಿ ವಿವರಿಸಲಾಗಿದೆ.

Facebook Comments

Sri Raghav

Admin