ಗೋಲ್ಡನ್ ಸ್ಟಾರ್ ಗಣೇಶ್ ಟೀಮ್ ಕೆಸಿಸಿ ಚಾಂಪಿಯನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

KCC-Cup

ಬೆಂಗಳೂರು. ಸೆ.09 : ಕನ್ನಡ ಚಲನಚಿತ್ರ ಕಪ್ ಟೂರ್ನಮೆಂಟ್ ಗೆ ತೆರೆ ಬಿದ್ದಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ಕೆಸಿಸಿ ಚಾಂಪಿಯನ್ ಆಗುವ ಮೂಲಕ 3 ದಿನ ಮೊದಲ ಗಣೇಶ ಚತುರ್ಥಿ ಆಚರಿಸಿಕೊಂಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆಯಿಂದ ಆರಂಭಗೊಂಡ ಕೆಸಿಸಿ ಕ್ರಿಕೆಟ್ ಕಪ್ ನ ಅಂತಿಮ ಹಣಾಹಣಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ತಂಡ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ತಂಡಗಳ ನಡುವೆ ಜಿದ್ದಾಜಿದ್ದಿ ದಿನ ಪಂದ್ಯಾವಳಿ ರೋಮಾಂಚನಕಾರಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ರಾಕಿಂಗ್ ಸ್ಟಾರ್ ಯಶ್ ತಂಡದವರು 123 ನನ್ನ ಗುರಿ ನೀಡಿತು. ಗೋಲ್ಡನ್ ಸ್ಟಾರ್ ಗಣೇಶ್ ತಂಡದಿಂದ ದಿಲ್ಶನ್ ತಿಲಕರತ್ನೆ ರ 70 ರನ್ನುಗಳ ಬೃಹತ್ ಮೊತ್ತದೊಂದಿಗೆ ಈ ಬಾರಿಯ ಕನ್ನಡ ಚಲನಚಿತ್ರ ಕಪ್ ನ್ನ ಎತ್ತಿಕೊಂಡಿದೆ. ಗೌರಿ ಗಣೇಶ ಹಬ್ಬದ ಕೊಡುಗೆಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ತಂಡ ಈ ಪಡೆದುಕೊಂಡಿದೆ.

6 ಟೀಂಗಳನ್ನೊಳಗೊಂಡ ಕನ್ನಡ ಚಲನಚಿತ್ರ ಕಪ್ ಟೂರ್ನಿಯಲ್ಲಿ ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್, ಗಣೇಶ್, ಉಪೇಂದ್ರ, ಹಾಗೂ ಯಶ್ ಭಾಗಿಯಾಗಿತ್ತು. ಈ ಒಂದು ಪಂದ್ಯಾವಳಿಯಲ್ಲಿ ಕೆ ಸಿ ಸಿ ಗೆ ಮೆರುಗು ನೀಡಿದ ಅಂತರಾಷ್ಟ್ರೀಯ ಮಾಜಿ ಕ್ರಿಕೆಟಿಗರದ ವೀರೇಂದ್ರ ಸೆಹ್ವಾಗ್, ಗಿಬ್ಸ್, ದಿಲ್ಶಾನ್, ಗಿಲ್ ಕ್ರಿಸ್ಟ್ ಕೆಸಿಸಿ ಯಲ್ಲಿ ಭಾಗಿಯಾಗಿರುವುದು ವಿಶೇಷ. ಅಂತರಾಷ್ಟ್ರೀಯ ಮಾದರಿಯಲ್ಲೇ ಈ ಪಂದ್ಯಾವಳಿ ನಡೆದಿದ್ದು ನಡೆದಿದ್ದು, ಈ ಪಂದ್ಯಗಳನ್ನು ನೋಡಲು ಜನಸಾಗರ ಹರಿದು ಬಂದಿತ್ತು. ಇಡೀ ಚಿನ್ನಸ್ವಾಮಿ ಕ್ರೀಡಾಂಗಣ ಹಬ್ಬದ ವಾತಾವರಣದಲ್ಲಿತ್ತು. ಈ ಒಂದು ಕ್ರೀಡಾಂಗಣದಲ್ಲಿ ಮನೋರಂಜನೆಯ ಕಾರ್ಯಕ್ರಮಗಳು ವಿಶೇಷವಾಗಿತ್ತು.

 

Facebook Comments

Sri Raghav

Admin